ಬಿಜೆಪಿಯಿಂದ ರಾಜ್ಯಕ್ಕೆ ಬಂದಿರುವ ಕಳಂಕ ನಿರ್ಮೂಲನೆ ಮಾಡುತ್ತೇವೆ -ಡಿಕೆಶಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಬುಧವಾರದಿಂದ ಪ್ರಜಾಧ್ವನಿ ಬಸ್ ಯಾತ್ರೆ ಪ್ರಾರಂಭಿಸಿದೆ.

ಬಸ್ ಯಾತ್ರೆಗೂ ಮುನ್ನ ಮಾಧ್ಯಮ ಪ್ರತಿ ನಿಧಿಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಬಿಜೆಪಿಯಿಂದ ನಮ್ಮ ರಾಜ್ಯಕ್ಕೆ  ಕಳಂಕ ಬಂದಿದೆ. ಕಳಂಕವನ್ನು ನಿರ್ಮೂಲನೆ ಮಾಡಲು ಪ್ರಜಾಧ್ವನಿ ಬಸ್ ಯಾತ್ರೆ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.

ಐತಿಹಾಸಿಕ ಬಸ್ ಯಾತ್ರೆ ಬುಧವಾರದಿಂದ ಆರಂಭವಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಯಾತ್ರೆ ಮುಗಿಸಿ ಕ್ಷೇತ್ರವಾರು ಸಂಚರಿಸುತ್ತೇವೆ ಎಂದು ತಿಳಿಸಿದರು.

224 ಕ್ಷೇತ್ರಗಳಲ್ಲಿ ಬಸ್ ಯಾತ್ರೆ ಮಾಡುತ್ತೇವೆ,20 ಜಿಲ್ಲೆಗಳಲ್ಲಿ ನಾನು ಸಿದ್ಧರಾಮಯ್ಯ ಸಂಚರಿಸುತ್ತೇವೆ ಎಂದು ಮಾಹಿತಿ ನೀಡಿದರು.

ಬೆಳಗಾವಿಯ ಟಿಳಕವಾಡಿಯ ವೀರಸೌಧದ ಬಳಿ ಬಸ್ ಯಾತ್ರೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು.

ನಂತರ ಚಿಕ್ಕೋಡಿಗೆ ಬಸ್ ಹೊರಟಿದೆಇದರಲ್ಲಿ  ಹಿರಿಯ ಕಾಂಗ್ರೆಸ್ ನಾಯಕರು ಜೊತೆಯಾಗಿ ಪ್ರಯಾಣಿಸುತ್ತಿದ್ದಾರೆ.

ಚಿಕ್ಕೋಡಿಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ಸಮಾವೇಶದಲ್ಲಿ  ಭಾಗಿಯಾಗಲಿದ್ದಾರೆ.