150 ಸೀಟು ಗೆದ್ದು ಬಿಜೆಪಿ ಅಧಿಕಾರಕ್ಕೆ: ಅರುಣ್‌ ಸಿಂಗ್‌ ಭವಿಷ್ಯ

ಚಿಕ್ಕಬಳ್ಳಾಪುರ: ಈ ಬಾರಿಯ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಗೆದ್ದು ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಜನತೆಗೆ ಡಬಲ್‌ ಎಂಜಿನ್‌ ಸರ್ಕಾರದ ಅಗತ್ಯತೆ ಮತ್ತು ಅಭಿವೃದ್ಧಿ ಕೆಲಸಗಳ ವೇಗದ ಬಗ್ಗೆ ನಂಬಿಕೆ ಇದೆ,ಹಾಗಾಗಿ ನಮ್ಮ ಪಕ್ಕೆ ಮತ ನೀಡುವುದು ಸತ್ಯ ಎಂದು ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನಾಯತಕತ್ವ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಪುನರುಚ್ಚರಿಸಿದರು.

ಅಧಿಕಾರಕಾರದಲ್ಲಿದ್ದಾಗ ಕಾಂಗ್ರೆಸ್‌ ಭ್ರಷ್ಟಾಚಾರ, ಸಮಯ ವ್ಯರ್ಥ ಮಾಡಿದ್ದೇ ಸಾಧನೆ ಎಂದು ಅರುಣ್ ಸಿಂಗ್ ಟೀಕಿಸಿದರು.

ಚಿಕ್ಕಬಳ್ಳಾಪುರ ಒಂದು ಜಿಲ್ಲೆಗೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಏನೇನು ಮಾಡಿದ್ದಾರೆ ಎಂಬ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.

ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಈ ಒಂದು ಜಿಲ್ಲೆಯಲ್ಲೇ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ.   3124 ಜನಕ್ಕೆ ಪಿಎಂ  ಆವಾಸ್‌ ಯೋಜನೆ ಅಡಿ ಮನೆಗಳು ಸಿಕ್ಕಿವೆ ಎಂದು ಸರ್ಕಾರದ ಸಾಧನೆಗಳನ್ನು ಬಿಡಿಸಿಟ್ಟರು.

ಸ್ಥಳೀಯ ಶಾಸಕ ಸುಧಾಕರ್‌ ಎಲ್ಲಾ ಯೋಜನೆಗಳನ್ನು ಮನೆಮನೆಗೆ ತಲುಪಿಸಲು ಶ್ರಮಿಸಿದ್ದಾರೆ.ಮೆಡಿಕಲ್‌ ಕಾಲೇಜು ಹಿಂದೆ ಆಡಳಿತ ಮಾಡಿದ ಸರ್ಕಾರಳು ಈ ಜಿಲ್ಲೆಗೆ ಕೊಟ್ಟಿರಲಿಲ್ಲ. ಆದರೆ ಶಾಸಕ ಸುಧಾಕರ್‌ ಅವರು ಸತತ ಪ್ರಯತ್ನ ಮಾಡಿ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಮೂಲಕ ಇಲ್ಲಿಗೆ ಮೆಡಿಕಲ್‌ ಕಾಲೇಜು ಮಂಜೂರು ಮಾಡಿಸಿದರು.

ಅದರ ಕಟ್ಟಡ ಕೂಡ ಸಿದ್ಧವಾಗಿದೆ. ಕೆಲವೇ ದಿನಗಳಲ್ಲಿ ಇದರ ಉದ್ಘಾಟನೆಯೂ ನಡೆಯುಲಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಪ್ರತಿ ಮನೆಗಳಿಗೆ ಸ್ಟಿಕ್ಕರ್‌,  ಗೋಡೆಗೆ ಪೈಂಟಿಂಗ್‌ ಮಾಡುವುದು ಜೊತೆ ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪುವಂತೆ ಮಾಡಲು ಪ್ಲಾನ್‌ ಮಾಡಲಾಗಿದೆ ಎಂದು ತಿಳಿಸಿದರ.

ರಾಜ್ಯದಲ್ಲಿ ಚುನಾವಣೆಯ ಬಳಿಕ ಕಾಂಗ್ರೆಸ್‌ 130-140 ಸೀಟು ಗೆದ್ದು ಮತ್ತೆ ಅಧಿಕಾರಕ್ಕೆ ಬರುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಅದು ಕನಸು ಎಂದು ಅರುಣ್ ಸಿಂಗ್ ಭವಿಷ್ಯ ನುಡಿದರು.