ಸಿಐಡಿ ಅಧಿಕಾರಿಗಳನ್ನೇ ತಳ್ಳಿ ಪರಾರಿಯಾದ ಪಿಎಸ್‌ಐ ಹಗರಣದ ಕಿಂಗ್‌ಪಿನ್‌

ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಕಿಂಗ್ ಪಿನ್ ರುದ್ರಗೌಡ ಪಾಟೀಲ್  ಸಿಐಡಿ ಅಧಿಕಾರಿಗಳನ್ನೇ ತಳ್ಳಿ ಪರಾರಿಯಾಗಿಬಿಟ್ಟಿದ್ದಾನೆ.

ಜಾಮೀನು ಸಿಕ್ಕ ಮೇಲೆ ಸಿಐಡಿ ವಿಚಾರಣೆಗೆ ರುದ್ರಗೌಡ ಪಾಟೀಲ್ ನಿರಂತರ ಗೈರಾಗಿದ್ದ.

ತುಮಕೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ವಿಚಾರಣೆಗಾಗಿ ವಶಕ್ಕೆ ಪಡೆಯಲು ಸಿಐಡಿ ಪೊಲೀಸರು ಮುಂದಾಗಿದ್ದರು.

ಗುರುವಾರ ರಾತ್ರಿ ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ನಿವಾಸಕ್ಕೆ ತೆಳಿದ್ದಾಗ ಸಿಐಡಿ ಪಿಎಸ್ಐ ಆನಂದ್ ಅವರನ್ನು ನೂಕಿ ರುದ್ರಗೌಡ ಪಾಟೀಲ್  ಪರಾರಿಯಾಗಿದ್ದಾನೆ.

ಈ ಬಗ್ಗೆ ಅಶೋಕ ನಗರ ಠಾಣೆಯಲ್ಲಿ ಸಿಐಡಿ ಪಿಎಸ್ಆ ಆನಂದ್ ದೂರು ದಾಖಲಿಸಿದ್ದಾರೆ.

ಅಫಜಲಪುರ ಬ್ಲಾಕ್‍ನ ಕಾಂಗ್ರೆಸ್ ಅಧ್ಯಕ್ಷನ ಸಹೋದರನಾಗಿರುವ ಆರ್.ಡಿ.ಪಾಟೀಲ್ ಪಿಎಸ್‍ಐ ನೇಮಕಾತಿಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಅಭ್ಯರ್ಥಿಗಳಿಗೆ ಆನ್ಸರ್ ಕೀ ರವಾನಿಸಿದ ಆರೋಪ ಹೊತ್ತಿದ್ದಾನೆ.