ಸಸ್ಯಕಾಶಿಯಲ್ಲಿ ಹೂಗಳಿಂದ ಬೆಂಗಳೂರು ಸಿಟಿ ಅನಾವರಣ

ಬೆಂಗಳೂರು: ರಾಜ್ಯದಲ್ಲಿ ಹಸಿರು ವಿಸ್ತರಣೆಗಾಗಿ 100 ಕೋಟಿ ರೂಪಾಯಿ ಕೊಟ್ಟಿದ್ದೇನೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಶುಕ್ರವಾರ 213 ನೇ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ರಾಜ್ಯದ ತೋಟಗಾರಿಕೆ ಇಲಾಖೆಯ ಶ್ರಮದಿಂದ ಹಸಿರು ಹೆಚ್ಚಾಗಿ ಉತ್ಪಾದನೆಯಾ ಗುತ್ತಿದೆ. ಬೆಂಗಳೂರಿನ ಗಾರ್ಡನ್ ಗಳನ್ನು ಬೆಳೆಸುವ ಮೂಲಕ ಗಾರ್ಡನ್ ಸಿಟಿಯ ಗತವೈಭವ ಮತ್ತೆ ಮರುಕಳಿಸುವಂತೆ ಮಾಡಬೇಕು ಎಂದು ಹೇಳಿದರು.

ಫ್ಲವರ್ ಶೋನಿಂದ ಸಸ್ಯ ಸಂಪತ್ತು ಪ್ರದರ್ಶನ ಆಗುತ್ತಿದೆ. ರಾಜ್ಯಾದ್ಯಂತ ಹಸಿರು ವಿಸ್ತರಣೆ ಆಗಬೇಕಿದೆ. ರಾಜ್ಯದಲ್ಲಿ ಹಸಿರೀಕರಣ ವಿಸ್ತರಣೆಗೆ ಬಜೆಟ್ ನಲ್ಲಿ 100 ಕೋಟಿ ಮೀಸಲಿಡುತ್ತೇವೆ.

ಗುಡ್ಡಗಾಡು ಪ್ರದೇಶದಲ್ಲೂ ಹಸಿರು ಹೆಚ್ಚು ಸಮೃದ್ಧಿಯಾಗಬೇಕು. ತೋಟಗಾರಿಕೆ ಫಾರ್ಮ್ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಇಂದಿನಿಂದ ಜನವರಿ 30ರವರೆಗೆ ಫಲಪುಷ್ಪ ಪ್ರದರ್ಶನ ಇರಲಿದೆ, ಬೆಂಗಳೂರು ನಗರದ ಚಿತ್ರಣ ಬಾರಿಯ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ವಿಶೇಷ ವಾಗಿದೆ ಎಂದು ತಿಳಿಸಿದರು.

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಥೀಮ್ ಬೆಂಗಳೂರು ನಗರದ ಇತಿಹಾಸವಾಗಿದ್ದು, ಲಾಲ್ಬಾಗ್ನಲ್ಲಿ ಹೂಗಳಿಂದ ನಗರ ಸೃಷ್ಟಿಯಾಗಿದೆ.

ಮೆಗಾ ಫ್ಲೋರಲ್ ಫ್ಲೋ ಪರಿಕಲ್ಪನೆ ಪುಷ್ಪ ಪಿರಾಮಿಡ್ ಗಳು ಕಂಗೊಳಸಲಿದೆ. ವಿದೇಶದಿಂದಲೂ ವಿವಿಧ ಬಗೆಯ ಹೂಗಳನ್ನ ತರಸಿ ಅಲಂಕಾರ ಮಾಡಲಾಗುತ್ತದೆ

ಫಲಪುಷ್ಪ ಪ್ರದರ್ಶನಕ್ಕೆ 10-15 ಲಕ್ಷ ಜನ ಬರುವ ನಿರೀಕ್ಷೆ ಇದೆ. ರಾಜ್ಯದ ಸಸ್ಯಸಂಪತ್ತಿನ ಪ್ರದರ್ಶನ ಆಗುತ್ತಿದೆ ಇದು ಹೆಮ್ಮೆ ವಿಷಯ ಎಂದು ಬೊಮ್ಮಾಯಿ‌‌ ಹೇಳಿದರು.

ತೋಟಗಾರಿಕಾ ಸಚಿವ ಮುನಿರತ್ನ, ತೋಟಗಾರಿಕೆ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಬೊಮ್ಮಾಯಿ ಅವರಿಗೆ ಸಾಥ್ ನೀಡಿದರು.