ಮಾಜಿ ಸಚಿವ ಕೆ. ಗಂಗಾಧರ ಗೌಡ ಮನೆ ಮೇಲೆ ಐಟಿ ದಾಳಿ

ಬೆಳ್ತಂಗಡಿ: ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಬೆಳ್ಳಂಬೆಳಗ್ಗೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಂದಬೆಟ್ಟು, ಬೆಳ್ತಂಗಡಿಯಲ್ಲಿರುವ ಮನೆ ಸೇರಿದಂತೆ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆ ಮೇಲೂ ದಾಳಿ ನಡೆಸಲಾಗಿದೆ.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಇತ್ತೀಚೆಗೆ ಟಿಕೆಟ್‌ ರಕ್ಷಿತ್ ಶಿವರಾಂ ಅವರಿಗೆ ಲಭಿಸುತ್ತಲೆ ರಾಜಕೀಯ ಓಡಾಟದಿಂದ ಹಿಂದೆ ಸರಿದಿದ್ದರು. ಇದೀಗ ಐಟಿ ದಾಳಿ ಶಾಕ್ ನೀಡಿದೆ.

ಪೊಲೀಸ್ ತಂಡದ ಸಮ್ಮುಖದಲ್ಲಿ ಮನೆಯಲ್ಲಿರುವ ಸ್ವತ್ತು, ಕಾಲೇಜಿನ ದಾಖಲೆ ಸೇರಿದಂತೆ ಎಲ್ಲಾ ತಪಾಸಣೆ ನಡೆಸಲಾಗುತ್ತಿದೆ.