ವಿವಿಧೆಡೆ ಲೋಕಾಯುಕ್ತ ದಾಳಿ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ ಮಾಡಿದ್ದು. ಆಸ್ತಿ ಗಳಿಕೆ ಮಾಡಿರುವ ಕೆಲ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ.

ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ಅವರ ಮನೆ ಮೇಲೆ ದಾಳಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಯಲಹಂಕದಲ್ಲಿರುವ ಗಂಗಾಧರಯ್ಯ ನಿವಾಸದಲ್ಲಿ ಪರಿಶೀಲನೆ ಮಾಡಲಾಗುತ್ತಿದೆ.

ಲೋಕಾಯುಕ್ತ ಎಸ್‌ಪಿ ಅಶೋಕ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಆಸ್ತಿ, ತೆರಿಗೆ ಹಣದ ಬಗ್ಗೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಕೋಲಾರದಲ್ಲೂ ಲೋಕಾಯುಕ್ತ ರೇಡ್ ನಡೆದಿದೆ. ಬಂಗಾರುಪೇಟೆ ಮುಳಬಾಗಿಲು ತಾಲೂಕು ಪಂಚಾಯಿತಿ ಇಒ ವೆಂಕಟೇಶ್ವರಪ್ಪ ಅವರಿಗೆ ಸೇರಿದ ಐದು ಕಡೆ ದಾಳಿ ಮಾಡಲಾಗಿದೆ.

ಎಂಟು ವರ್ಷದಿಂದ ವೆಂಕಟೇಶ್ವರಪ್ಪ ಸೇವೆ ಸಲ್ಲಿಸುತ್ತಿದ್ದರು. ಎರಡು ದಿನದ ಹಿಂದೆಯಷ್ಟೇ ವರ್ಗಾವಣೆ ಮಾಡಲಾಗಿತ್ತು.

ದಾವಣಗೆರೆಯಲ್ಲೂ ಲೋಕಯುಕ್ತ ದಾಳಿ ನಡೆದಿದೆ.