ಪ್ರೀತಮ್ ಗೆ ಸೋಲು

ಹಾಸನ: ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರೀತಮ್ ಗೌಡ ಅವರು ಮುಖಭಂಗ ಅನುಭವಿಸಿದ್ದಾರೆ.

ಟಿಕೆಟ್ ಘೋಷಣೆಯಾಗುವ ಮೊದಲಿನಿಂದಲೂ ಇಡೀ ದೇಶದಲ್ಲಿ ಹಾಸನ ಕ್ಷೇತ್ರ ತೀವ್ರ ಕುತೂಹಲ ತೆರಳಿಸಿತ್ತು.

ಜೆಡಿಎಸ್ ನಿಂದ ಭವಾನಿ ರೇವಣ್ಣ ಸ್ಪರ್ಧಿಸಲು ಇಚ್ಛಿಸಿದ್ದರು. ಇದು ಕುಟುಂಬ ಕಲಹಕ್ಕು ಕಾರಣವಾಗಿತ್ತು, ಕಡೆಗೆ ದೊಡ್ಡ ಗೌಡರ ಸಂಧಾನ ಮತ್ತು ಎಚ್ ಡಿ ಕುಮಾರಸ್ವಾಮಿ ಅವರ ಸ್ವಪ್ರಯತ್ನದಿಂದ ಸ್ವರೂಪ್‌‌ ಪ್ರಕಾಶ್  ಅವರಿಗೆ ಟಿಕೆಟ್ ನೀಡಲಾಯಿತು.

ಪ್ರೀತಂ ಗೌಡ ತಾನು 50 ಸಾವಿರಕ್ಕೂಹೆಚ್ಚು ಲೀಡ್ ನಿಂದ ಗೆಲ್ಲುವುದಾಗಿ ಹೇಳಿಕೊಂಡಿದ್ದರು. ಆದರೆ ಹಾಸನ ಮತದಾರ ಇದಕ್ಕೆ ಕ್ಯಾರೆ ಎಂದಿಲ್ಲ.

ಸ್ವರೂಪ್ ಪರವಾಗಿ ಎಚ್. ಡಿ ಕುಮಾರಸ್ವಾಮಿ, ರೇವಣ್ಣ, ಭವಾನಿ ರೇವಣ್ಣ, ಎಚ್‍.ಡಿ ದೇವೇಗೌಡರು ಸೇರಿದಂತೆ ಇಡಿ ಕ್ಷೇತ್ರದ ಜನ ನಿಂತರು ಹಾಗಾಗಿ ಭಾರಿ ಬಹುಮತದಿಂದ ಸ್ವರೂಪ್ ಗೆಲುವು ಸಾಧಿಸಿದ್ದಾರೆ.