ಎಂ.ಬಿ.ಪಾಟೀಲ್ ಹೇಳಿಕೆಗೆ ನಯವಾಗಿ ಟಾಂಗ್ ನೀಡಿದ ಡಿಕೆಶಿ

ಬೆಂಗಳೂರು:‌ ಅಧಿಕಾರ ಮತ್ತಿತರ ಪಕ್ಷದ ವಿಚಾರಗಳನ್ನು ನೋಡಿಕೊಳ್ಳಲು ಎಐಸಿಸಿ ಇದೆ. ಕಾಂಗ್ರೆಸ್ ರಾಷ್ಟ್ರೀಯ ಮುಖಂಡರು ಇದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮಾತ್ರ ನಮ್ಮ ಆದ್ಯತೆ ಎಂದು ಶಿವಕುಮಾರ್ ಟಾಂಗ್ ನೀಡಿದ್ದಾರೆ

ಸಿದ್ದರಾಮಯ್ಯ ಅವರೇ ಮುಂದಿನ ಐದು ವರ್ಷವೂ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ, ಸಿಎಂ ಅಧಿಕಾರ ಹಂಚಿಕೆ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸಚಿವ ಎಂ ಬಿ ಪಾಟೀಲ್ ಸೋಮವಾರ ಹೇಳಿದ್ದರು.

ಮಂಗಳವಾರ ವಿಧಾನ ಸೌಧದ ಬಳಿ ಈ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ ಶಿವಕುಮಾರ್,ಯಾರು ಏನಾದರೂ ಹೇಳಿಕೊಳ್ಳಲಿ ಅದನ್ನೆಲ್ಲಾ ನೋಡಿಕೊಳ್ಳಲು ಎಐಸಿಸಿ ಇದೆಯಲ್ಲಾ ಎಂದು ಸಾವದಾನವಾಗಿಯೇ ಹೇಳಿದರು.

ಯಾರು ಏನು ಬೇಕಾದರೂ ಹೇಳಿಕೊಳ್ಳಲಿ. ನಾನು ಆ ಬಗ್ಗೆ ಏನನ್ನೂ ಮಾತಾಡುವುದಿಲ್ಲ ಎಂದು ತಿಳಿಸಿದರು.

ಕನಕಪುರಕ್ಕೆ ನಾನೇ ಬಂದು ನಿಮಗೆ ಕೃತಜ್ಞತೆ ಸಲ್ಲಿಸಿ, ಅಭಿನಂದನೆ ಸ್ವೀಕರಿಸುವೆ. ನೀವ್ಯಾರೂ ಬೆಂಗಳೂರಿಗೆ ಬರುವ ತೊಂದರೆ ತೆಗೆದುಕೊಳ್ಳಬೇಡಿ ಎಂದು ಕನಕಪುರದಅಭಿಮಾನಿಗಳು, ಪಕ್ಷದ  ಕಾರ್ಯಕರ್ತರಿಗೆ ಡಿಸಿಎಂ ಡಿ. ಕೆ ಶಿವಕುಮಾರ್  ಇದೇ ವೇಳೆ ಮನವಿ ಮಾಡಿದರು

ದೆಹಲಿ ಪ್ರವಾಸದ ನಂತರ ನಾನೇ ಖುದ್ದಾಗಿ ಕನಕಪುರಕ್ಕೆ ಬರುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಕ್ಷೇತ್ರದ ಜನರಿಗೆ ತೊಂದರೆ ಆಗುವುದು ಬೇಡ ಎಂಬ ಕಾಳಜಿಯಿಂದ ಈ ಮನವಿ ಮಾಡುತಿದ್ದೇನೆ. ಯಾರೂ ಅನ್ಯತಾ ಭಾವಿಸುವುದು ಬೇಡ ಎಂದು ಅವರು ಮನವಿ ಮಾಡಿದ್ದಾರೆ.