ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ನರಸೀಪುರ: ಬಸ್ ಹಾಗೂ ಇನ್ನೊವಾ ಕಾರಿನ ನಡುವ
ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಹತ್ತು ಜನ ಸಾವಿಗೀಡಾಗಿದ್ದು ಮೂರು ಜನರ ಸ್ಥಿತಿ ಚಿಂತಾಜನಕವಾಗಿದೆ.
ಕೊಳ್ಳೇಗಾಲ ಮತ್ತು ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿನ ಕುರುಬೂರು ಗ್ರಾಮದ ಪಿಂಜರ ಪೋಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಮೃತರಾದವರನ್ನ ಬಳ್ಳಾರಿ ಮೂಲದ
ಮಂಜುನಾಥ್ (35 ),ಪೂರ್ಣಿಮಾ (30) ಕಾರ್ತಿಕ್ (08)ಪವನ್ (08),ಗಾಯತ್ರಿ (28)ಶ್ರಾವ್ಯ (05),ಕೋಟ್ಯರೇಶ್ (45)ಸುಜಾತ (40)
ಸಂದೀಪ್ (23) ಆದಿತ್ಯ ಡ್ರೈವರ್ ಎಂದು ತಿಳಿದುಬಂದಿದೆ.
ಗಾಯಗೊಂಡವರನ್ನ ಜನಾರ್ಧನ್ 45,ಶಶಿ ಕುಮಾರ್
ಪುನೀತ್ ಎಂದು ತಿಳಿದುಬಂದಿದೆ.
ಸೋಮವಾರ ಮಧ್ಯಾಹ್ನ ಟಿ.ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಬಳಿಕ ಇನೋವಾ ಕಾರು ಕೊಳ್ಳೆಗಾಲ ಮಾರ್ಗವಾಗಿ ನರಸಿಪುರದತ್ತ. ಖಾಸಗಿ ಬಸ್ ನರಸಿಪುರದಿಂದ ಕೊಳ್ಳೆಗಾಲದೆಡೆಗೆ ಬರುತ್ತಿದ್ದು ಇನ್ನೊವಾ ಕಾರಿನ ಚಾಲಕನ ಅಜಾಗರೂಕತೆಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಏಳೆಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮೂರ್ನಾಲ್ಲು ಜನ ಗಂಭೀರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆದಲ್ಲಿ ಒಂದಿಬ್ಬರು ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಟಿ.ನರಸೀಪುರ ಪೊಲೀಸರು ಆಗಮಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಥಳಕ್ಕೆ ಮೈಸೂರು ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯರ ನೆರವಿನಲ್ಲಿ ಶವಗಳನ್ನು ಹೊರ ತೆಗೆದು ಮೈಸೂರು ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ

