ಉಚಿತ ಪ್ರಯಾಣ ಬಸ್ ನಲ್ಲಿ ನಾರಿಮಣಿಯರ ಬಿಗ್ ಫೈಟಿಂಗ್

ಮೈಸೂರು: ಉಚಿತ ಬಸ್ ಪ್ರಯಾಣವನ್ನೇನೊ‌ ಸರ್ಕಾರ ಮಾಡಿದೆ.ಇದೀಗ‌ ಅದೇ ಯೋಜನೆ ನಾರಿ ಶಕ್ತಿ ಯೋಜನೆ ಸರ್ಕಾರಕ್ಕೆ ಮುಜುಗರ ತರುತ್ತಿದೆ.

ಉಚಿತ ಬಸ್ ಪ್ರಯಾಣ ಮಾಡುವ ಹುಮ್ಮಸ್ಸಿನಲ್ಲಿ ನಾರಿಯರು ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ.ಇದು ನಿಜಕ್ಕೂ ನಾಚಿಕೆಗೇಡಿನ ವಿಷಯ.

ಮಹಿಳೆಯರು ಒಮ್ಮೆಗೆ ಪ್ರಯಾಣ ಮುಂದಾಗುತ್ತಿರುವುದರಿಂದ ಒಂದೆಡೆ ನೂಕು ನುಗ್ಗಲಾದರೆ ಮತ್ತಿಂದೆಡೆ ಸೀಟ್ ಗಾಗಿ ಮಹಿಳೆಯರು ಕೈ ಕೈ ಮಿಲಾಯಿಸುತ್ತಿದ್ದಾರೆ.

ಬಸ್ ಒಂದರಲ್ಲಿ ಸೀಟ್ ಗಾಗಿ ಮಹಿಳೆಯರು ಜಡೆ ಹಿಡಿದು ಕಿತ್ತಾಡಿರುವ ವಿಡಿಯೋ ವೈರಲ್ ಆಗಿದ್ದು‌ ಜನರೇ‌ ಛೀಮಾರಿ ಹಾಕುತ್ತಿದ್ದಾರೆ.

ಸರ್ಕಾರ ಕೂಡಲೇ ಈ ಸಮಸ್ಯೆಗೆ ಪರಿಹಾರ ಹುಡುಕದಿದ್ದಲ್ಲಿ ಇನ್ನೇನು ಅನಾಹುತಗಳಾಗಲಿವೆಯೋ‌ ಆ ಭಗವಂತನೇ  ಬಲ್ಲ.