ಮೈಸೂರು: ಬಣ್ಣಗಳ ಬೆಳಕಿನ ಚಿತ್ತಾರದಲ್ಲಿ ಕನ್ನಡ ನಾಡು ನುಡಿಯ ವೈಭವವನ್ನು ಕಣ್ಣಿಗೆ ಕಟ್ಟುವಂತೆ ಮಾಡಿದ ನೃತ್ಯಕ್ಕೆ ಮನಸೋತ ಯುವ ಸಮೂಹ ಚಪ್ಪಾಳೆ ಶಿಳ್ಳೆಗಳ ಸುರಿಮಳೆ ನಡುವೆ ಸಂಭ್ರಮಿಸಿತು

ಶನಿವಾರ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆದ ಮೈಸೂರು ದಸರಾ ಮಹೋತ್ಸದ ಪ್ರಮುಖ ಆಕರ್ಷಣೆಯಾದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.
ಹೆಚ್.ಡಿ.ಕೋಟೆಯ ಸೆಂಟ್ ಮೆರಿಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯ ಬಗ್ಗೆ ತಿಳಿಸುವ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ಗೀತೆಗೆ ಹೆಜ್ಜೆ ಜನರನ್ನು ರಂಜಿಸಿದರು.
ರಾಮನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆ ಸಾರುವ ಸಂಗೀತಕ್ಕೆ ನರ್ತಿಸುವ ಮೂಲಕ ಭಾರತವು ವಿವಿಧತೆಯಲ್ಲಿ ಏಕತೆ ಎಂಬುದನ್ನು ತೋರಿಸಿದರು.
ರಾಮನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ತಂಡ ಕಿಚ್ಚ ಸುದೀಪ್ ಹಾಗೂ ರಮ್ಯ ಅಭಿನಯದ ಜಸ್ಟ್ ಮಾತ್ ಮಾತಲಿ ಚಿತ್ರದ ಎಲ್ಲೊ ಜಿನುಗಿರುವ ನೀರು ಎಂಬ ಗೀತೆ ಹಾಗೂ ರಘು ದೀಕ್ಷಿತ್ ಹಾಡಿರುವ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಭಿಕರ ಮನಸೂರೆಗೊಂಡರು.
ದೇಶದ ಬೆನ್ನೆಲುಬಾಗರಿವ ರೈತರ ಬಗ್ಗೆ ಹಾಗೂ ಅವರ ಕಷ್ಟಗಳ ಬಗ್ಗೆ ವಿಷ್ಣುವರ್ಧನ್ ಅಭಿನಯದ ನಿನೆಲ್ಲೋ ನಾ ಅಲ್ಲೆ ಚಿತ್ರದ ಆಕಾಶ ಭೂಮಿ ಮಡಿಲಲ್ಲಿ ಬೆಳೆದ ಹಾಡಿಗೆ
ಪಾಂಡವಪುರದ ಜ್ಞಾನಬಂಧು ವಿದ್ಯಾಲಯ ಹಾಗೂ ಹುಣಸೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ನೃತ್ಯ ರೂಪಕ ಮಾಡಿದರು
ವಿದ್ಯಾರ್ಥಿಗಳು ದೇಶದ ಗಡಿ ಕಾಯುವ ಸೈನಿಕರ ದೇಶ ಪ್ರೇಮದ ಬಗ್ಗೆ ಚಿತ್ರಗೀತೆಗಳಿಗೆ ಹೆಜ್ಜೆ ಹಾಕಿದರು.
ಮೈಸೂರಿನ ಕರ್ಣಾಮಯಿ ಫೌಂಡೇಶನ್ ವಿಶೇಷ ಮಕ್ಕಳ ತರಬೇತಿ ಶಾಲೆಯ ವಿಶೇಷ ಮಕ್ಕಳು ಕಾಂತರ ಚಿತ್ರಗೀತೆ ವರಾಹ ರೂಪಂ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮತ್ತಿತರರು ಪಾಲ್ಗೊಂಡಿದ್ದರು.

