ಮೈಸೂರು: ನಾಡಿನೆಲ್ಲಡೆ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದ್ದು,ಪ್ರತಿ ಮನೆಗಳಲ್ಲೂ ವಾಹನಗಳಿಗೆ ವಿಶೇಷ ಪೂಜೆ ಮಾಡಿದರು.
ಇತ್ತ ಮೈಸೂರು ಅರಮನೆಯಲ್ಲೂ ರಾಜ ಪರಂಪರೆಯಂತೆ ಆಯುಧ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನೆರವೇರಿತು.
ಬೆ 5.30ಕ್ಕೆ ಚಂಡಿ ಹೋಮದೊಂದಿಗೆ ಪೂಜೆ ಆರಂಭವಾಯಿತು.ಬೆ 6.05 ರಿಂದ 06.15ಕ್ಕೆ ಖಾಸಾ ಆಯುಧಗಳನ್ನು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ತರಲಾಯಿತು.
ನಂತರ 07.15ಕ್ಕೆ ಖಾಸಾ ಆಯುಧಗಳು ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆಗೆ ವಾಪಸ್ಸಾಗಿ
ಕಲ್ಯಾಣಮಂಟಪಕ್ಕೆ ಆಗಮನವಾಯಿತು.
ಬೆ 9.30ಕ್ಕೆ ಚಂಡಿಹೋಮ ಪೂರ್ಣಾಹುತಿ ನೆರವೇರಿತು
ಬೆ 11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಒಂಟೆ, ಪಟ್ಟದ ಹಸು ಆಗಮನವಾಯಿತು.
ಮ 12.20 ಆಯುಧಪೂಜೆ ನೆರವೇರಿಸಲಾಯಿತು. 12.45ರವರೆಗೆ
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಗಳಿಗೆ ಪೂಜೆ ಸಲ್ಲಿಸಿದರು.
ಅರಮನೆ ಕಲ್ಯಾಣ ಮಂಟಪದಲ್ಲಿ
ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಕಾರುಗಳಿಗೆ ಯದುವೀರ್ ಪೂಜೆ ಸಲ್ಲಿಸಿದರು.
ಸಂಜೆ ಖಾಸಗಿ ದರ್ಬಾರ್ ನಂತರ ಶುಭ ಮುಹೂರ್ತದಲ್ಲಿ ಸಿಂಹಾಸನ ವಿಸರ್ಜನೆ ಮಾಡಲಾಗುತ್ತದೆ
ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆಯನ್ನು ಯದುವೀರ್ ಮಾಡಲಿದ್ದಾರೆ.
ಅಂಬಾವಿಲಾಸದಲ್ಲಿ ದಪ್ತಾರ್ ಪೂಜೆ
ಮಹಾಸನ್ನಿಧಾನದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರವರು ಅಮಲದೇವಿ ದರ್ಶನ ಮಾಡುವ ಮೂಲಕ ಅರಮನೆಯಲ್ಲಿ ಆಯುಧ ಪೂಜೆ ಮುಕ್ತಾಯಗೊಳ್ಳಲಿದೆ.

