ಮೈಸೂರು: ರಾಜಕೀಯದಲ್ಲಿ ಯಾರಾದರೂ ವಿಲನ್ ಇದ್ದರೆ ಅದು ಮಿಸ್ಟರ್ ಕುಮಾರಸ್ವಾಮಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.
ಮೈಸೂರಿನಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ,
ಸರಕಾರ ಬೀಳುವಾಗ ಅಮೆರಿಕದಲ್ಲಿ ಕೂತಿದ್ದವರು ಯಾರು ಇದಕ್ಕೆ ಏನಂತ ಕರೆಯಬೇಕು ಎಂದು ತಿರುಗೇಟು ನೀಡಿದರು.
ಇಡೀ ಒಂದು ವರ್ಷ ಎರಡು ತಿಂಗಳು ತಾಜ್ ವೆಸ್ಟ್ ಎಂಡ್ ನಲ್ಲಿ ಕಾಲ ಕಳೆದರು, ವಿಧಾನಸಭೆಯಲ್ಲಿ ಬಿಜೆಪಿ ಅವರೇ ಸರಕಾರ ಬೀಳಿಸಿದ್ದು ಅಂತಾ ಹೇಳಿದರು, ಇದು ರೆಕಾರ್ಡ್ ಆಗಿದೆ ಅಸೆಂಬ್ಲಿ ರೆಕಾರ್ಡ್ ಬೇಕಾದರೆ ಬಿಡುಗಡೆ ಮಾಡುತ್ತೇನೆ ನೋಡಲಿ ಎಂದರು.
ಸಚಿವರು, ಶಾಸಕರ ಭೇಟಿ ಮಾಡದೆ ಹೋಟೆಲ್ ನಲ್ಲಿ ಕುಳಿತಿದ್ದರು ಈಗ ನನ್ನ ಮೇಲೆ ಆರೋಪ ಮಾಡುತ್ತಾರೆ,
ರಾಜಕೀಯವಾಗಿ ಹತಾಶರಾಗಿ ಬಾಯಿಗೆ ಬಂದ ರೀತಿ ಮಾತಾಡಿದ್ದಾರೆ ಎಂದು ಸಿದ್ದು ಟೀಕಿಸಿದರು.
ಬಿಜೆಪಿಯವರು ಹತಾಶರಾಗಿದ್ದಾರೆ,ಅವರಿ ಗಿಂತಾ ಕುಮಾರಸ್ವಾಮಿ ಜಾಸ್ತಿ ಹತಾಶರಾಗಿದ್ದಾರೆ.
ಬಿಜೆಪಿ – ಜೆಡಿಎಸ್ ನವರು ಎಳವರು, ಕುರುಡರ ಕಥೆ ಆದಂತಾಗಿದೆ, ಇವರ ಮೇಲೆ ಅವರು,ಅವರ ಮೇಲೆ ಇವರು ಡಿಪೇಂಡ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದು ಎಟಿಎಂ ಸರಕಾರ ಎಂಬ ಬಿಜೆಪಿ ಟ್ವಿಟ್ ಗೆ ಸಿಎಂ ತಿರುಗೇಟು ನೀಡಿ, ಅವರಿಗೆ ಮಾನ ಮರ್ಯಾದೆ ಇದಿಯಾ ಕೋಟ್ಯಾಂತರ ರೂಪಾಯಿ ಹಣದಲ್ಲಿ ಆಪರೇಷನ್ ಕಮಲ ಮಾಡಿದವರು ನಮ್ಮ ಬಗ್ಗೆ ಮಾತಾಡುತ್ತಾರೆ ಎಂದು ಸಿಎಂ ಗರಂ ಆದರು.
ರಾಜ್ಯ ಆರ್ಥಿಕವಾಗಿ ದಿವಾಳಿ ಆಗಲು ಬಿಜೆಪೀನೆ ಕಾರಣ, ವಿದ್ಯುತ್ ತೊಂದರೆ ಆಗಿದ್ದರೆ ಅದಕ್ಕೂ ಅವರೇ ಕಾರಣ,ಅವರ ಆಡಳಿತಾವಧಿಯಲ್ಲಿ
ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿಲ್ಲ,ಅವರಿಗೆ ನಮ್ಮ ಪಕ್ಷದ ಬಗ್ಗೆ ಮಾತಾಡಲು ನೈತಿಕತೆ ಇಲ್ಲ ಎಂದು ಹೇಳಿದರು.
ಹಣ ಇಲ್ಲದಿದ್ದರು ಕಾಮಗಾರಿ ಟೆಂಡರ್ ಕರೆದು 30 ಸಾವಿರ ಕೋಟಿ ರೂ ಪೆಂಡಿಂಗ್ ಬಿಲ್ ಇದೆ, ಇದಕ್ಕೆ ಯಾರು ಹೊಣೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಮ್ಮ ಐದು ವರ್ಷದ ಆಡಳಿತ ಅರ್ಥಿಕ ಪರಿಸ್ಥಿತಿ, ಬಿಜೆಪಿ ಅವಧಿಯ ಅರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸುತ್ತೇನೆ ಆಗ ಸತ್ಯ ಗೊತ್ತಾಗುತ್ತದೆ ಎಂದು ಹೇಳಿದರು ಸಿಎಂ.
ಹೈಕಮಾಂಡ್ ಗೆ ದುಡ್ಡು ಕಳಿಸುತ್ತೇವೆ ಎಂಬುದು ಸುಳ್ಳು ನಾವು ಯಾರಿಗೂ ಒಂದು ಪೈಸೆ ಕೊಟ್ಟಿಲ್ಲ ಎಂದು ಇದೇ ವೇಳೆ ಸಿದ್ದು ತಿಳಿಸಿದರು.
ರಾಮನಗರ ವಿಚಾರದ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ ಆ ವಿಚಾರದ ಬಗ್ಗೆ ಅವರನ್ನೆ ಕೇಳಿ,
ನನಗೆ ಅದು ಗೊತ್ತಿಲ್ಲ,ನನ್ನ ಜೊತೆ ಅವರು ಚರ್ಚೆ ಮಾಡಿಲ್ಲ, ಗೊತ್ತಿಲ್ಲದ ವಿಚಾರದ ಬಗ್ಗೆ ಹೆಚ್ಚಾಗಿ ಮಾತಾಡುವುದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.
ಸಂಪುಟ ಪುನರಚನೆ ಆಗಲಿದೆಯೆ ಎಂಬ ಪ್ರಶ್ನೆಗೆ,ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ,ವಿಸ್ತರಣೆ ಹಾಗೂ ಮತ್ತೊಂದು ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ಈ ರೀತಿಯ ಚರ್ಚೆ ಯಾವುದು ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ನಾಡಹಬ್ಬ ರೀ ಲುಕ್ ಮಾಡುವ ವಿಚಾರವಾಗಿ ಡಿ. ಕೆ.ಶಿವಕುಮಾರ್ ಹೇಳಿದ್ದಾರಲ್ಲ ಎಂಬ ಮತ್ತೊಂದು ಪ್ರಶ್ನೆಗೆ ಮೈಸೂರು ಜನರ ಅಭಿಪ್ರಾಯ ಕೇಳಿ ರೀ ಲುಕ್ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಉತ್ತರಿಸಿದರು.
ಒಟ್ಟಾರೆ ಈ ಬಾರಿ ದಸರಾ ಶಾಂತಿಯುತ
ವಾಗಿತ್ತು,ಅಧಿಕಾರಿಗಳು ಟೀಂ ವರ್ಕ್ ಆಗಿ ಕೆಲಸ ಮಾಡಿದ್ದಾರೆ ಜನಪ್ರತಿನಿಧಿಗಳು ಸಹಕರಿಸಿದ್ದಾರೆ ಎಂದು ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದರು.

