ಬೆಂಗಳೂರು: ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ಜೈಲಿನಲ್ಲಿರುವ ಚಿತ್ರದುರ್ಗದ ಶ್ರೀ ಮುರುಘಾ ಶ್ರೀ ಗಳಿಗೆ ಜಾಮೀನು ಮಂಜೂರಾಗಿದೆ.
ಶ್ರೀಗಳ ಮೇಲೆ ಎರಡು ಪೋಕ್ಸೊ ಪ್ರಕರಣ ದಾಖಲಾಗಿತ್ತು.ಅದರಲ್ಲಿ ಒಂದು ಪ್ರಕರಣದಲ್ಲಿ ಮಾತ್ರ ಜಾಮಿನು ಮಂಜೂರಾಗಿದೆ
ಹೈಕೋರ್ಟ್ ಏಳು ಶರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಆದರೆ ಯಾವುದೇ ಕಾರಣಕ್ಕೂ ಚಿತ್ರದುರ್ಗದಕ್ಕೆ ಹೋಗುವಂತಿಲ್ಲ ಎಂದು ಸೂಚಿಸಿದೆ.
ಎರಡು ಪೋಕ್ಸೊ ಪ್ರಕರಣದಲ್ಲಿ ಅ.31ರಂದು ವಾದ ವಿವಾದ ಪೂರ್ಣಗೊಳಿಸಿ ತೀರ್ಪನ್ನು ಇವತ್ತಿಗೆ ನ್ಯಾಯಾಲಯ ಕಾಯ್ದಿರಿಸಿತ್ತು.
ಸೆಪ್ಟೆಂಬರ್ 1, 2022 ರಂದು ಶ್ರೀಗಳನ್ನು ಬಂಧಿಸಲಾಗಿತ್ತು,ಅವರು ಚಿತ್ರದುರ್ಗ ಜೈಲಿನಲ್ಲಿದ್ದಾರೆ.
ಇನ್ನೊಂದು ಪೋಕ್ಸೊ ಕೇಸಲ್ಲಿ ಜಾಮೀನು ಸಿಕ್ಕರೆ ಮಾತ್ರ ಮುರುಘಾ ಶ್ರೀಗಳು ಜೈಲಿಂದ ಬಿಡುಗಡೆಯಾಗಲಿದ್ದಾರೆ.

