ಮೈಸೂರು: ವಿದ್ಯುತ್ ಕದ್ದ ಕುಮಾರಸ್ವಾಮಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಏನಿದೆ.
ಕುಮಾರಸ್ವಾಮಿ ವಿದ್ಯುತ್ ಕದ್ದಿದ್ದು,ದಂಡ ಕಟ್ಟಿದ್ದೂ ಕದ್ದಿದ್ದನ್ನು ಒಪ್ಪಿಕೊಂಡಿದ್ದು ಸತ್ಯ ತಾನೇ,ಇಂತವರಿಂದ ನಾವು ಏನು ಕೇಳಿಸಿಕೊಳ್ಳಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರಿನಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಪದೇ ಪದೇ ಕುಮಾರಸ್ವಾಮಿ ವಿಚಾರದಲ್ಲಿ ನನಗೆ ಪ್ರತಿಕ್ರಿಯೆ ಕೊಡಲು ಇಷ್ಟ ಇಲ್ಲ,ಅವರು ಹತಶಾರಾಗಿದ್ದಾರೆ, ಹಾಗಾಗಿ ಏನೇನೋ ಮಾತನಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.
ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದ ಡಾ ಯತೀಂದ್ರ ಸಿದ್ದರಾಮಯ್ಯ ವಿಡಿಯೋ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ.
ನೆನ್ನೆ ಪೊಲೀಸ್ ಇನ್ಸಪೆಕ್ಟರ್ ವರ್ಗಾವಣೆಯಲ್ಲಿ ವಿವೇಕಾನಂದ ಹೆಸರು. ಯತೀಂದ್ರ ವೈರಲ್ ವಿಡಿಯೋದಲ್ಲೂ ಉಲ್ಲೇಖವಾಗಿದ್ದ ವಿವೇಕಾನಂದ ಹೆಸರು ಕುರಿತು ಸಿಎಂ ಸ್ಪಷ್ಟನೆ ನೀಡಿದರು.
ಆ ವಿವೇಕಾನಂದ ಬೇರೆ ಈ ವಿವೇಕಾನಂದ ಬೇರೆ,ಅವರು ಬಿಇಒ, ಇವರು ಇನ್ಸಪೆಕ್ಟರ್. ಬಿಇಒ ನಮ್ಮ ಕ್ಷೇತ್ರವರು ಈಗ ವರ್ಗಾವಣೆ ಆಗಿರುವುದು ಚಾಮರಾಜ ಕ್ಷೇತ್ರ ವ್ಯಾಪ್ತಿ. ಯಾರು ವರ್ಗಾವಣೆ ಮಾಡಿಸಿಕೊಂಡರು ಅನ್ನುವುದನ್ನು ಸ್ಥಳೀಯ ಶಾಸಕರನ್ನು ಕೇಳಿ ಎಂದರು.
ವಿವೇಕಾನಂದ ಹೆಸರಿಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡುವಾಗ ಬಿಜೆಪಿಯಲ್ಲಿ ಏನ್ ಆಗುತ್ತದೆ ಎಂಬುದನ್ನ ಸ್ವಲ್ಪದಿನ ಕಾದು ನೋಡಿ,ವೇಟ್ ಅಂಡ್ ಸೀ,
ಕಾಯಿರಿ, ಕಾಯಿರಿ, ಕಾಯಿರಿ ಎಂದು ಮೂರು ಭಾರಿ ಸಿದ್ದರಾಮಯ್ಯ ಹೇಳಿದರು.
ಅಸಮಾಧಾನ ಹೇಗೆ ಸ್ಪೋಟವಾಗುತ್ತೆ ಎಂಬುದು ನಿಮಗೆ ಗೊತ್ತಾಗುತ್ತೆ, ನಿನ್ನೆಯ ಸಭೆಯಿಂದ ಯತ್ನಾಳ್, ಬೆಲ್ಲದ್, ಜಾರಕಿಹೊಳಿ ಯಾಕೇ ಎದ್ದು ಹೋದರು. ಯಡಿಯೂರಪ್ಪ ಮಗನನ್ನ ಅಧ್ಯಕ್ಷ ಮಾಡಿರುವುದು ಅಶೋಕನನ್ನ ವಿಪಕ್ಷ ನಾಯಕ ಮಾಡಿರುವುದು ಅವರಿಗೆ ಬೇಸರ ತಂದಿದೆ,ಸ್ವಲ್ಪ ದಿನ ನೀವೇ ಕಾದು ನೋಡಿ, ಬಿಜೆಪಿಯಲ್ಲಿ ಏನೇನ್ ಆಗುತ್ತದೆ ಎಂಬುದು ನಿಮಗೇ ಗೊತ್ತಾಗುತ್ತದೆ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದರು.
ಈಗ ಚುನಾವಣೆ ನಡೆದರೂ ಬಿಜೆಪಿ ಗೆಲ್ಲುತ್ತದೆ ಎಂಬ ಯಡಿಯೂರಪ್ಪ ಹೇಳಿಕೆಗೆ ಸಿಟ್ಟಾದ ಸಿದ್ದು,ಈಗ ಯಾಕ್ರಿ ಚುನಾವಣೆ ನಡೆಯುತ್ತದೆ ಎಂದು ಕಾರವಾಗಿ ಪ್ರಶ್ನಿಸಿದರು.
ಹಿಂದೆಯೂ ಹೇಳುತ್ತಿದ್ದರು ನಾವೇ ಅಧಿಕಾರಕ್ಕೆ ಬರುತ್ತೇವೆ ಅಂಥ. ಅಧಿಕಾರಕ್ಕೆ ಬಂದಿದ್ದು ಯಾರ್ರಿ ಎಂದರು ಸಿಎಂ.

