ಮೈಸೂರು: ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 14ನೇ ಘಟಕೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು.
ಸೋಮವಾರ ಶಿವರಾತ್ರೀಶ್ವರ ನಗರದಲ್ಲಿರುವ ಜೆಎಸ್ಎಸ್ ಮೆಡಿಕಲ್ ಕಾಲೇಜಿನ ಆವರಣದಲ್ಲಿ ನಡೆದ ಈ ಘಟಿಕೋತ್ಸವದ ವೇಳೆ ಚಿನ್ನದ ಪದಕ ಗಳಿಸಿದವರು ಒಬ್ಬರಿಗೊಬ್ಬರು ಶುಭ ಕೋರುತ್ತಾ ಖುಷಿ ಪಟ್ಟರು.
ಜಗದ್ಗುರು ಹಾಗೂ ಕಾಲೇಜಿನ ಕುಲಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕಂದ್ರ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಘಟಕೋತ್ಸವ ನಡೆಯಿತು.
ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ. ಎಂ ಜಗದೀಶ್ ಕುಮಾರ್ ಅವರು ಘಟಿಕೋತ್ಸವ ಭಾಷಣ ಮಾಡಿ, ವಿದ್ಯಾರ್ಥಿ ಗಳಿಗೆ ಚಿನ್ನದ ಪದಕ ಮತ್ತು ಪ್ರಶಸ್ತಿಗಳನ್ನು ವಿತರಿಸಿದರು.
ಜೆಎಸ್ಎಸ್ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜೆ ಬೆಟ್ಸೂರ್ ಮಠ ಹಾಗೂ ಸಮಕುಲಾಧಿಪತಿಗಳಾದ ಡಾ. ಬಿ ಸುರೇಶ್ ಅವರು ಉಪಸ್ಥಿತರಿದ್ದರು.
ಈ ಬಾರಿ 2546 ಪದವೀಧರರು ಸಂಬಂಧಿಸಿದ ನಿಕಾಯಗಳ ಪದವಿ ಮತ್ತು ಡಿಪ್ಲೋಮೋ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು.
49 ವಿದ್ಯಾರ್ಥಿಗಳಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ನೀಡಲಾಯಿತು.
ಒಟ್ಟಾರೆ 55 ವಿದ್ಯಾರ್ಥಿಗಳಿಗೆ 84 ಚಿನ್ನದ ಪದಕಗಳು ಮತ್ತು ಪ್ರಶಸ್ತಿಗಳನ್ನು ಅವರ ಶೈಕ್ಷಣಿಕ ಸಾಧನೆಗಾಗಿ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ವಿಸಿ ಡಾ. ಸುರೀಂದರ್ ಸಿಂಗ್, ಡಾ. ಸುಮಾ, ಡಾ. ದಾಕ್ಷಾಯಿಣಿ, ಡಾ. ಮಮತಾ, ಪವನ್ ಕುಮಾರ್, ಪ್ರೊ. ರವೀಶ್, ಪರಶುರಾಮ್, ಡಾ. ಪ್ರಮೋದ್ ಕುಮಾರ್, ಅವರುಗಳು ಪಾಲ್ಗೊಂಡಿದ್ದರು.

