ಎನ್ ಇ ಪಿ ಜಾರಿಗೆ ತರದಿದ್ದರೆ ವಿದ್ಯಾರ್ಥಿಗಳಿಗೆ ನಷ್ಟ:ಯುಜಿಸಿ ಅಧ್ಯಕ್ಷ ಪ್ರೊ. ಜಗದೀಶ್ ಕುಮಾರ್

ಮೈಸೂರು: ಎನ್ ಇ ಪಿ ಜಾರಿಗೆ ತರದಿದ್ದರೆ ವಿದ್ಯಾರ್ಥಿಗಳಿಗೆ ನಷ್ಟವಾಗಲಿದೆ ಎಂದು ಯುಜಿಸಿ ಅಧ್ಯಕ್ಷ ಪ್ರೊಫೆಸರ್ ಜಗದೀಶ್ ಕುಮಾರ್ ಹೇಳಿದರು.

ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 14ನೇ ಘಟಿಕೋತ್ಸವ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಎನ್ ಇ ಪಿಯನ್ನು ಈಗಾಗಲೇ ಜಾರಿಗೆ ತರಲು ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ ಸಿ ಪಿಯಿಂದ ವಿದ್ಯಾರ್ಥಿಗಳಿಗೆ ಹಲವಾರು ಪ್ರಯೋಜನಗಳಿವೆ.

ಹಾಗಾಗಿ ಇದನ್ನು ಜಾರಿಗೆ ತರದಿದ್ದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತೊಂದರೆ ಆಗಲಿದೆ ಹಾಗಾಗಿ ದೇಶದ ಪ್ರತಿ ರಾಜ್ಯದವರು ಎನ್ ಇ ಪಿಯನ್ನ ಜಾರಿಗೆ ತರಬೇಕೆಂದು ಅವರು ಮನವಿ ಮಾಡಿದರು.

ಈಗಾಗಲೇ ದೇಶದಾದ್ಯಂತ ಎಲ್ಲಾ ರಾಜ್ಯಗಳ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿಗಳು ಪ್ರಾಂಶುಪಾಲರುಗಳೊಂದಿಗೆ ಈ ವಿಷಯ ಕುರಿತು ಚರ್ಚಿಸಲಾಗಿದೆ ಹಾಗೂ ಅದನ್ನು ಜಾರಿಗೆ ತರುವ ಕುರಿತು ಹಲವು ವಿಷಯಗಳನ್ನು ತಿಳಿಸಲಾಗಿದೆ.

ಈ ಪಾಲಿಸಿಯಿಂದ ಯಾವ ರೀತಿಯ ಪ್ರಯೋಜನ ಉಂಟಾಗಲಿದೆ ರಾಷ್ಟ್ರೀಯವಾಗಿ ಹಾಗೂ ವಿಶ್ವದಾದ್ಯಂತ ಇದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನಾಗಲಿದೆ ಎಂಬುದನ್ನು ತಿಳಿಸಿದ್ದೇವೆ ಎಂದು ಪ್ರೊ.ಜಗದೀಶ್ ಕುಮಾರ್ ಹೇಳಿದರು

ಮೈಸೂರು ಕೆಎಸ್ಒಯುನಲ್ಲಿ ಅವ್ಯವಹಾರ ನಡೆಯುತ್ತಿದೆಯಲ್ಲ ಎಂಬ ಪ್ರಶ್ನೆಗೆ, ಏನೇ ಅವ್ಯವಹಾರ ನಡೆದರೂ ನಮ್ಮ ಗಮನಕ್ಕೆ ಬರುತ್ತದೆ, ಆದರೆ ನಾವು ಅವರ ವಿರುದ್ಧ ಕ್ರಮ ಕೈಗೊಳ್ಳಲು ಬರುವುದಿಲ್ಲ ಹಾಗಾಗಿ ನಾವು ಕಾನೂನಿನಂತೆ ಕ್ರಮ ಕೈಗೊಳ್ಳಲು ತಿಳಿಸುತ್ತೇವೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಬಿ.ಸಿ. ಸುರೀಂದ್ರ ಸಿಂಗ್ ಅವರು ಉಪಸ್ಥಿತರಿದ್ದರು.