ರಾಜಕಾರಣ ಯಾವುದೇ ಮನೆತನಕ್ಕೆ ಸಿಮೀತವಲ್ಲ -ಮಾಜಿ ಸಚಿವ ವಿ. ಸೋಮಣ್ಣ

ಮೈಸೂರು, ನ. 23- ರಾಜಕಾರಣ ಯಾವುದೇ ಮನೆತನಕ್ಕೆ ಸಿಮೀತವಲ್ಲ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.

ನಗರದಲ್ಲಿ ಇಂದು ವಿ. ಸೋಮಣ್ಣ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜಕಾರಣ ನಾಟಕ ಕಂಪನಿ ಅಲ್ಲ. ಒಳ ಒಪ್ಪಂದಕ್ಕೆ ಸಿಮೀತವಲ್ಲ. ರಾಜ ಕಾರಣ ದೊಂಬರಾಟ ಅಲ್ಲ ಎಂದು ಅವರು ತಿಳಿಸಿದರು.

ಡಿ. 6ರ ನಂತರ ನನ್ನ ಮನಸ್ಸಿ‌ನ ಭಾವನೆ ಹೇಳುತ್ತೇನೆ ಎಂದು ಅವರು ಹೇಳಿದರು.

ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆ ಆಗಿದೆ. 6ನೇ ತಾರೀಕು ಆದ ಮೇಲೆ ಅದನ್ನು ವಿವರಿಸುತ್ತೇನೆ ಎಂದರು.

ಹೈಕಮಾಂಡ್ ಸೂಚನೆ ತಲೆ ಮೇಲೆ ಹೊತ್ತು ದುಡಿಮೆ ಮಾಡಿದ ಮೇಲೆ ಯಾವ ರೀತಿ ನನಗೆ ಹೊಡೆತ ಆಯ್ತು ಎಂಬುದನ್ನು ಡಿ. 6ರಂದು ಬಿಡಿ, ಬಿಡಿಯಾಗಿ ವಿವರಿಸುತ್ತೇನೆ ಎಂದು ಅವರು ಹೇಳಿದರು.

ಯಡಿಯೂರಪ್ಪ ತಮ್ಮನ್ನು ಸಂಪರ್ಕಿಸಿದ್ದರಾ ಎಂಬ ಪ್ರಶ್ನೆಗೆ ಸೋಮಣ್ಣ ಪ್ರತಿಕ್ರಿಯಿಸಿ, ನನ್ನನ್ನು ಯಾರು ಸಂಪರ್ಕಿಸಿಲ್ಲ. ನಾನು ಯಾರನ್ನು ಸಂಪರ್ಕಿಸಿಲ್ಲ. ಆ ಥರದ ಯಾವ ಪ್ರಯತ್ನವೂ ನಡೆದಿಲ್ಲವೆಂದು ಅವರು ಹೇಳಿದರು.