ದರೋಡೆಕೋರರ ರಕ್ಷಣೆಗೆ ನಿಂತ ಸರ್ಕಾರ -ಹೆಚ್​ ಡಿ ಕೆ ವಾಗ್ದಾಳಿ

ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದಿರುವ ಸರ್ಕಾರದ ವಿರುದ್ಧ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ.

ದರೋಡೆಕೋರರನ್ನು ರಕ್ಷಣೆ ಮಾಡಲೆಂದೇ ಈ ಸರ್ಕಾರ ಇದೆ. ಈ ಮೂಲಕ ದರೋಡೆಕೋರರ ರಕ್ಷಣೆಗೆ ನಿಂತಿದೆ ಎಂದು ಕುಟುಕಿದ್ದಾರೆ.

ಕೋರ್ಟ್​​ನಲ್ಲಿ ಏನು ನಿರ್ಧಾರ ಆಗುತ್ತದೆ ಎಂಬುದನ್ನು ನೋಡಿ ಆನಂತರ ಮಾತಾಡುತ್ತೇನೆ ಎಂದು ಹೇಳಿದರು.

ಮರ್ಯಾದೆ ಇಲ್ಲದವರಿಗೆ ಕೋರ್ಟ್​​ನಲ್ಲಿ ಇದ್ದರೇನು, ಎಲ್ಲಿದ್ದರೇನು ಎಲ್ಲವನ್ನೂ ದುಡ್ಡಿನಿಂದ ಕೊಂಡುಕೊಳ್ಳುತ್ತೇವೆ ಎಂಬ ದುರಹಂಕಾರ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.