ಭಾರತ ಧೈರ್ಯದಿಂದ ಭಯೋತ್ಪಾದನೆ ಹತ್ತಿಕ್ಕುತ್ತಿದೆ–ಪ್ರಧಾನಿ ಮೋದಿ

ನವದೆಹಲಿ: ಮುಂಬೈ ದಾಳಿಯಲ್ಲಿ ಹುತಾತ್ಮರಾದ ಎಲ್ಲರಿಗೂ ನಮನ ಸಲ್ಲಿಸಿದ ಪ್ರಧಾನಿ ಮೋದಿ, ರಾಷ್ಟ್ರವು ವೀರ ಹುತಾತ್ಮರನ್ನು ಸ್ಮರಿಸುತ್ತಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮುಂಬೈ ದಾಳಿ ಬಗ್ಗೆ ಪ್ರಸ್ತಾಪಿಸಿದರು.

ಭಾರತ ತನ್ನೆಲ್ಲ ಧೈರ್ಯದಿಂದ ಭಯೋತ್ಪಾದನೆಯನ್ನು ಹತ್ತಿಕ್ಕುತ್ತಿದೆ ಎಂದು ಮೋದಿ ಅವರು ತಿಳಿಸಿ, , ದೇಶವೂ ಅತ್ಯಂತ ಘೋರ ದಾಳಿಯನ್ನು ದಿನ ಎದುರಿಸಿದೆ ಆದರೆ ದಾಳಿಯಿಂದ ಚೇತರಿಸಿಕೊಂಡಿರುವುದಾಗಿ ಅವರು ಹೇಳಿದರು.

ನವೆಂಬರ್ 26 ಅನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ದಿನವೇ ದೇಶದಲ್ಲಿ ಅತ್ಯಂತ ಘೋರ ಭಯೋತ್ಪಾದಕ ದಾಳಿ ನಡೆಯಿತು. ಭಯೋತ್ಪಾದಕರು ಮುಂಬೈ ಮತ್ತು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದಾರೆ. ಆದರೆ, ನಾವು ದಾಳಿಯಿಂದ ಚೇತರಿಸಿಕೊಂಡಿದ್ದು, ನಾವು ಧೈರ್ಯದಿಂದ ಭಯೋತ್ಪಾದನೆಯನ್ನು ಹತ್ತಿಕ್ಕುತ್ತಿರುವುದು ಭಾರತದ ಸಾಮಥ್ರ್ಯ ಎಂದು ಹೇಳಿದರು.

ದೇಶವನ್ನು ಅಭಿವೃದ್ಧಿಪಡಿಸುವ ಸಂಕಲ್ಪವನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ ಎಂದು ಮೋದಿ ಹೇಳಿದರು.

ಕೆಲವು ಕುಟುಂಬಗಳು ವಿದೇಶದಲ್ಲಿ ಮದುವೆಯನ್ನು ಆಯೋಜಿಸುವ ಕುರಿತು ಮೋದಿ ಅವರು ಮಾತನಾಡಿ, ಇಂತಹ ಆಚರಣೆಗಳು ದೇಶದೊಳಗೆ ನಡೆಸುವಂತೆ ಅವರುತಿಳಿಸಿ, ಇತ್ತೀಚಿನ ದಿನಗಳಲ್ಲಿ ಕೆಲವು ಕುಟುಂಬಗಳು ವಿದೇಶಕ್ಕೆ ತೆರಳಿ ಮದುವೆಗಳನ್ನು ನಡೆಸುವ ಹೊಸ ಪರಿಪಾಠ ಶುರುಮಾಡಿಕೊಂಡಿವೆ. ಇದು ಅಗತ್ಯವೇ ಎಂದು ಪ್ರಶ್ನಿಸಿದರು.

ಮದುವೆಗಾಗಿ ಶಾಪಿಂಗ್ ಮಾಡುವಾಗ, ಜನರು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಅವರು ಈ ಸಂರ್ಭದಲ್ಲಿ ಹೇಳಿದರು

ಭಾರತದ ನೆಲದಲ್ಲಿ ಜನರು ಮದುವೆ ಸಮಾರಂಭ ಆಯೋಜಿಸಿದರೆ, ದೇಶದ ಹಣವು ದೇಶದಲ್ಲೇ ಉಳಿಯುತ್ತದೆ ಎಂದು ಪ್ರಧಾನಿಯವರು ತಿಳಿಸಿದರು.

ಇತ್ತೀಚಿನ ಹಬ್ಬಗಳಲ್ಲಿ ಸುಮಾರು 4 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರ ನಡೆದಿದೆ ಮತ್ತು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಲು ಜನರಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂದಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.