ದೇಶದ ಅತಿದೊಡ್ಡ ರಕ್ಷಣಾ ಕಾರ್ಯ ಸಕ್ಸಸ್:41 ಕಾರ್ಮಿಕರು ಉತ್ತರಕಾಶಿ ಸುರಂಗದಿಂದ ಸುರಕ್ಷಿತವಾಗಿ ಹೊರಗೆ

ಡೆಹ್ರಾಡೂನ್: ಕಳೆದ 17 ದಿನಗಳಿಂದ ಉತ್ತರಾಖಂಡದ ಉತ್ತರ ಕಾಶಿಯ ಸಮೀಪ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ತಂಡ ಹೊರ ತಂದು ಇಡೀ ದೇಶದ ಜನತೆಯ ಶ್ಲಘನೆಗೆ ಪಾತ್ರರಾಗಿದ್ದಾರೆ.

ಪೈಪ್ ಮೂಲಕ ಒಬ್ಬೊಬ್ಬರನ್ನಾಗಿ ಕಾರ್ಮಿಕರನ್ನು ಹೊರಗೆ ಕರೆತರಲಾಯಿತು.

ಕರ್ಮಿಕರು ಹೊರಬರುತ್ತಿದ್ದಂತೆ ಅವರ ಕುಟುಂಬಸ್ಥರು ಪಟಾಕಿ ಸಿಡಿಸಿ ಹಾರ ಹಾಕಿ ಬರಮಾಡಿಕೊಂಡು ಸಂಭ್ರಮಿಸಿದರು.

ಆದರೆ 17 ದಿನ ಸುರಂಗದೊಳಗೆ ಕತ್ತಲೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಕಾರ್ಮಿಕರನ್ನು ತಕ್ಷಣಕ್ಕೆ ಜನರ ಮುಂದೆ ಬಿಡದೆ ಅವರಿಗೆ ಪ್ರಾಥಮಿಕ ಔಷಧೋಪಾಚಾರ ಮಾಡಿ‌ ದೈರ್ಯ ತುಂಬಲಾಯಿತು.

ಇಡೀ ದೇಶದಾದ್ಯಂತ ರಕ್ಷಣಾ ತಂಡಕ್ಕೆ ಅಭಿನಂದನೆಗಳ ಸುರಿಮಳೆಯೇ ಹರಿದು ಬಂದಿದೆ.

ಇದು ನಿಜಕ್ಕೂ ನಮ್ಮ ದೇಶದ ಅತಿ ದೊಡ್ಡ ಯಶಸ್ವೀ ಕಾರ್ಯಾಚರಣೆಯಾಗಿದೆ.

ಈ ವೇಳೆ ಕಾರ್ಮಿಕರ ಕುಟುಂಬದವರು ಸಿಹಿ ಹಂಚಿ ಖುಷಿ ಪಟ್ಟರು.ಸುರಂಗದಿಂದ ಹೊರಗೆ ಬಂದ ಕಾರ್ಮಿಕರು ಸಂತಸದ ನಿಟ್ಟುಸಿರು ಬಿಟ್ಟಿದ್ದಾರೆ. ಜತೆಗೆ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಿದರು.

ಎಲ್ಲಾ 41 ಕಾರ್ಮಿಕರನ್ನು ನೇರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಲಾಗುತ್ತದೆ.

ಸ್ವತಃ ಮುಖ್ಯ ಮಂತ್ರಿ ಧಾಮಿ ಸ್ಥಳದಲ್ಲೇ ಇದ್ದು ಪ್ರತಿಯೊಬ್ಬ ಕಾರ್ಮಿಕರ ಮೈದಡವಿ ಸಮಾಧಾನ ಹೇಳಿ ಶುಭ ಹಾರೈಸಿದರು.