ಬೆಳಗಾವಿ: ಹುಬ್ಬಳ್ಳಿಯ ಮುಸ್ಲೀಂ ಸಮಾವೇಶದ ವೇಳೆ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಪಕ್ಕದಲ್ಲಿ ಐಸಿಸ್(ISIS) ಸಂಪರ್ಕವಿರುವ ಮೌಲ್ವಿ ಇದ್ದ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಪಕ್ಕದಲ್ಲಿ ಐಸಿಸ್(ISIS) ಸಂಪರ್ಕವಿರುವ ಮೌಲ್ವಿ ಇದ್ದರೆಂದು ಹೇಳಿದರು.
ಇಂಥವರ ಸಭೆಗೆ ಸಿಎಂ ಹೋಗಿದ್ದಾರೆ, ಹುಡುಗಾಟಿಕೆಗೆ ನಾನು ಹೇಳುತ್ತಿಲ್ಲ, ಗಂಭೀರವಾಗಿ ಹೇಳುತ್ತಿದ್ದೇನೆ ಎಂದು ತಿಳಿಸಿದರು.
ವಿಜಯಪುರದಲ್ಲಿ ಗೋಹತ್ಯೆ ನಿಷೇಧ ಮಾಡಬೇಕು ಎಂದಾಗ ನಮ್ಮನ್ನು ಹತ್ಯೆ ಮಾಡುವುದಾಗಿ ಹೇಳಿದ್ದವ ವೇದಿಕೆಯಲ್ಲಿ ಇದ್ದ, ಒಂದು ವಾರ ತಡೆಯಿರಿ ಆತ ಮತ್ತು ಐಸಿಸ್ ಬಗ್ಗೆ ಹೇಳುತ್ತೇನೆ ಎಂದು ಯತ್ನಾಳ್ ತಿಳಿಸಿದರು.

