ನವದೆಹಲಿ: ಸಂಸತ್ ಭವನದ ಮೇಲೆ ದಾಳಿ ನಡೆದು 22 ವರ್ಷಗಳು ತುಂಬಿದ ಈದಿನದಂದೇ ಅಧಿವೇಶನ ನಡೆಯುತ್ತಿದ್ದಾಗಲೇ ಭದ್ರತಾ ಲೋಪ ನಡೆದಿದ್ದು,ಇಡೀ ದೇಶ ಬೆಚ್ಚಿಬಿದ್ದಿದೆ.

ಲೋಕಸಭಾ ವೀಕ್ಷಕರ ಗ್ಯಾಲರಿಯಿಂದ ಇಬ್ಬರು ವ್ಯಕ್ತಿಗಳು ಮೇಲಿನಿಂದ ಜಿಗಿದು ಕಲರ್ ಸ್ಮೋಕಿಂಗ್ ಬಾಂಬ್ ಸಿಡಿಸಿ ಸಂಸದರ ಡೆಸ್ಕ್ ಗಳ ಮೇಲೆ ಮಂಗನಂತೆ ನೆಗೆದು ಮುನ್ನುಗ್ಗುತ್ತಾರೆ, ಕೂಡಲೇ ಭದ್ರತಾ ಸಿಬ್ಬಂದಿ ಇಬ್ಬರನ್ನು ಹಿಡಿದಿದ್ದಾರೆ.
ಸಂಸತ್ ಮೇಲೆ ದಾಳಿ ನಡೆದು 22 ವರ್ಷವಾದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿತ್ತು.
ಒಟ್ಟು ಎರಡು ಘಟನೆ ನಡೆದಿದ್ದು,ಇಬ್ಬರು ಅನಾಮಿಕ ವ್ಯಕ್ತಿಗಳು ಲೋಕಸಭೆ ಗ್ಯಾಲರಿಯಿಂದ ಜಿಗಿದು ಕಲರ್ ಸ್ಮೋಕ್ ಬಾಂಬ್ ಸಿಡಿಸಿದರೆ, ಇಬ್ಬರು ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ.
ಮಹಾರಾಷ್ಟ್ರಮೂಲದ ಅಮೊಲ್ ಸಿಂದ್ಹೆ ಮತ್ತು ಯುವತಿ ನೀಲಮ್ ಕೌರ್, ಸಾಗರ್ ಶರ್ಮ,ಮೈಸೂರಿನ ಮನೋರಂಜನ್ ವಶಕ್ಕೆ ಪಡೆದು ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.
ಸಂಸತ್ ಭವನದ ಒಳ ಪ್ರವೇಶಿಸಲು ಪಾಸ್ ಇಲ್ಲದೇ ಯಾರನ್ನು ಬಿಡುವುದಿಲ್ಲ ಹೀಗಿರುವಾಗ ಇಷ್ಟೊಂದು ದೊಡ್ಡ ಮಟ್ಟದ ಭದ್ರತಾ ಲೋಪ ನಡೆದಿದ್ದು ಹೇಗೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

