ಮೈಸೂರು: ಖಂಡಿತ ನಾನು ನ್ಯಾಷನಲ್ ಲೀಡರ್ ಅಲ್ಲ, ಸಾಮಾನ್ಯ ಕುಟುಂಬದ ಹಿನ್ನೆಲೆಯಲ್ಲಿ ಬಂದು ಬರವಣಿಗೆ ಮೂಲಕ ಹೆಸರು ಸಂಪಾದಿಸಿ ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,ಸಿಎಂ ಪುತ್ರ ಡಾ.ಯತೀಂದ್ರ ಹೇಳಿಕೆಗೆ ಈ ರೀತಿ ಟಾಂಗ್ ನೀಡಿದರು.
ಅಪ್ಪ ಸಿಎಂ ಆಗಿದ್ದರಿಂದ ತನ್ನ ಖಾಸಗಿ ಲ್ಯಾಬ್ ಗೆ ಗುತ್ತಿಗೆ ಪಡೆದು ಕೊಳ್ಳುವಂತವರು ನ್ಯಾಷನಲ್ ಲೀಡರ್ ಎಂದು ಕುಟುಕಿದರು.
ತಾನು ಹೇಳಿದ ವರ್ಗಾವಣೆ ಲಿಸ್ಟ್ ಗೆ ಸಹಿ ಮಾಡಿ ಅಂತಾ ಸಿಎಂ ಮೇಲೆ ಒತ್ತಡ ತರುವವರು ನ್ಯಾಷನಲ್ ಲೀಡರ್ ಎಂದು ವ್ಯಂಗ್ಯವಾಡಿದರು.
ಮೈಸೂರು ಭಾಗದ ನಿಜವಾದ ನ್ಯಾಷನಲ್ ಲೀಡರ್ ಯತೀಂದ್ರ ಸಿದ್ದರಾಮಯ್ಯ ಎಂದು ಪ್ರತಾಪ್ ಸಿಂಹ ಚಾಟಿ ಬೀಸಿದರು.
ರಾಮನನ್ನು ಕಾಂಗ್ರೆಸಿಗರೆ ಭಕ್ತಿ ಭಾವದಿಂದ ಪೂಜಿಸಿದ್ದರೆ ಬಿಜೆಪಿಗೆ ಯಾಕೆ ಈ ಪೇಟೆಂಟ್ ಸಿಗುತ್ತಿತ್ತು,ಕಾಂಗ್ರೆಸ್ ಗೆ ರಾಮ ರಾಜ್ಯದ ಮೇಲೆ ನಂಬಿಕೆ ಇದೆಯಾ ಅಥವಾ ರಾವಣ ರಾಜ್ಯದ ಮೇಲೆ ನಂಬಿಕೆ ಇದೆಯ ಎಂದು ಅವರನ್ನೇ ಕೇಳಿ ಎಂದರು.
ಕಾಂಗ್ರೆಸ್ ಗೆ ಗಾಂಧೀಜಿಯ ರಾಮ ರಾಜ್ಯದ ಮೇಲೆ ನಂಬಿಕೆ ಇಲ್ಲ ಎಂದು ಟೀಕಿಸಿದರು.
ಅಯೋಧ್ಯೆ ಮಂತ್ರಾಕ್ಷತೆಗೆ ಅನ್ನ ಭಾಗ್ಯ ಅಕ್ಕಿ ಬಳಸಿದ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ
ಪ್ರತಾಪ್ ಸಿಂಹ,ಮಂತ್ರಾಕ್ಷತೆ ಸ್ವೀಕರಿಸಲು ಆಗದ ಕೈ ಗಳಿಗೆ ಮಂತ್ರಾಕ್ಷತೆ ಗೆ ಅಕ್ಕಿ ಕೊಡಲು ಮನಸ್ಸು ಬರುತ್ತಾ ಎಂದು ಕಾರವಾಗಿ ಪ್ರಶ್ನಿಸಿದರು.
ಅಕ್ಷತೆ, ಗೋತ್ರದ ಮೇಲೆ ಕಾಂಗ್ರೆಸ್ ಗೆ ಹಾಗೂ ಸಿದ್ದರಾಮಯ್ಯ ಅವರಿಗೆ ನಂಬಿಕೆ ಇಲ್ಲ,
ಅಯೋಧ್ಯೆಗೆ ಹೋಗುವುದು ಬಿಡುವುದು ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

