ಬಿಜೆಪಿಯವರು ಹೇಳಿದಂತೆ ಕೇಳ್ತಾ ಹೋದರೆ ಆಡಳಿತ ಮಾಡೋಕಾಗಲ್ಲ -ಪರಮೇಶ್ವರ್

ಬೆಂಗಳೂರು: ಬಿಜೆಪಿಯವರು ಹೇಳಿದಂತೆ ಕೇಳೋಕೆ ಹೋದರೆ ನಾವು ಆಡಳಿತ ಮಾಡೋಕೆ ಆಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಹಾವೇರಿ ರೇಪ್ ಕೇಸ್ ಪ್ರಕರಣದ
ತನಿಖೆ ಆಗುತ್ತಿದೆ, ಸಂಪೂರ್ಣ ತನಿಖೆ ಆಗಲಿ ಅಲ್ಲಿಯವರೆಗೂ ನಾನೇನು ಹೇಳುವುದಿಲ್ಲ ಈಗಾಗಲೇ 7-8 ಜನ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ ಎಂದು ತಿಳಿಸಿದರು.

ಈ ಮಧ್ಯೆ ಸಂತ್ರಸ್ತೆ ಊರಿಗೆ ಹೋಗಬೇಕು ಅಂದಿದ್ದಾರೆ. ಅದಕ್ಕೆ ಕಳುಹಿಸಲಾಗಿದೆ. ತನಿಖೆ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಕರಣ ಸಂಬಂಧ ಸ್ಥಳೀಯ ಇನ್ಸ್ ಪೆಕ್ಟರ್ ನನ್ನು ಅಮಾನತು ಮಾಡಲಾಗಿದೆ. ತನಿಖೆ ವರದಿ ಬರಲಿ ಮುಂದೆ ನೋಡೋಣ ಎಂದು ಹೇಳಿದರು.

ಎಸ್‌ಐಟಿ ತನಿಖೆಗೆ ಬಿಜೆಪಿ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿದ ‌ಗೃಹಸಚಿವರು, ಬಿಜೆಪಿಯವರು ಎಸ್‌ಐಟಿ, ಸಿಬಿಐ, ಸಿಒಡಿ ಎಲ್ಲಾ ಮಾಡಿ ಅನ್ನುತ್ತಾರೆ ಅವರು ಹೇಳಿದ್ದೆಲ್ಲಾ ಮಾಡಿಕೊಂಡು ಕೂತರೇ ಆಡಳಿತ ನಡೆಸೋಕೆ ಆಗುತ್ತಾ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದಲ್ಲಿ ಇದ್ದಾಗ ನಾವು ಹೇಳಿದಾಗ ಅವರೇನು ಕೇಳಿದ್ರಾ ಅವರೇನು ನಮ್ಮನ್ನು ಕೇಳಿ ಆಡಳಿತ ಮಾಡಿದ್ರಾ ನಾವು ಜನರಿಗೆ ಜನಪರ ಆಡಳಿತ ಕೊಡುತ್ತೇವೆ ಎಂದು ಮಾತುಕೊಟ್ಟಿದ್ದೇವೆ. ಆ ಕೆಲಸ ಮಾಡುತ್ತೇವೆ ಎಂದು ಪರಮೇಶ್ವರ್ ಕಡಕ್ ಆಗಿ ಹೇಳಿದರು.