ಇಡಿಯಿಂದ ದುರುದ್ದೇಶದಿಂದ ನಮ್ಮ ಹೆಸರು ಬಳಕೆ: ಡಾ. ಯತೀಂದ್ರ

ಮೈಸೂರು: ಮುಡಾದಲ್ಲಿ ಆಗಿರುವ ಭ್ರಷ್ಟಾಚಾರಕ್ಕೂ ನಮ್ಮ14 ನಿವೇಶನಗಳಿಗೂ ಸಂಬಂಧ ಇಲ್ಲ, ಇದೇ ಬೇರೆ ವಿಚಾರ,ಇಡಿಯ ವರು ದುರುದ್ದೇಶದಿಂದ ನಮ್ಮ ಹೆಸರು ಬಳಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ‌ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತನಿಧಿಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಮುಡಾದಲ್ಲಿ ನಮ್ಮ ಜಮೀನು ವಶ ಪಡಿಸಿಕೊಂಡಿದ್ದಕ್ಕೆ ಬದಲಿ ನಿವೇಶನ ಕೊಟ್ಟಿದ್ದರು. ಆದರೆ,ಮುಡಾದಲ್ಲಿ ಆಗಿರುವ ಭ್ರಷ್ಟಾಚಾರಕ್ಕೂ ನಮ್ಮ 14 ನಿವೇಶನಗಳಿಗೂ ಸಂಬಂಧ ಇಲ್ಲ,ನಮಗೆ ಕೊಟ್ಟಿರುವ ಸೈಟು ಕಾನೂ ನಾತ್ಮಕವಾಗಿದೆ ಎಂದು ಅವರಿಗೂ ಗೊತ್ತು,ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಬೇಕು ಎಂದು ಕೇಂದ್ರ ಬಿಜೆಪಿ ಮತ್ತು ರಾಜ್ಯ ಬಿಜೆಪಿ ಇಡಿಗೆ ಒತ್ತಡ ಹೇರಿವೆ ಎಂದು ಆರೋಪಿಸಿದರು.

ಕೇಂದ್ರ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿಯು ತ್ತಿವೆ. ಸತ್ಯ, ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತದೆ, ಸಿದ್ದರಾಮಯ್ಯ ಅವರು ಈ ಆರೋಪದಿಂದ ಮುಕ್ತರಾಗಿ ಹೊರ ಬರುತ್ತಾರೆ ಎಂದು ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿ ದರು.

ನಮ್ಮ ಕುಟುಂಬ ಪ್ರಾಪರ್ಟಿ ಸೀಜ್ ಮಾಡಿಲ್ಲ, ಯಾವುದೇ ದಾಖಲೆ ಕೂಡ ಸಿಕ್ಕಿಲ್ಲ ಇದೆಲ್ಲವು ಜನರ ಮನಸ್ಸಲ್ಲಿ ಸಿದ್ದರಾಮಯ್ಯ ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಅಷ್ಟೇ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ,
ಅದು ದೊಡ್ಡ ನಾಯಕರಿಗೆ ಬಿಟ್ಟಿದ್ದು
ಆ ಬಗ್ಗೆ ಮಾತನಾಡಲು ನಾನು ಚಿಕ್ಕವನು ಎಂದು ತಿಳಿಸಿದರು.

ಅಧ್ಯಕ್ಷರಿಗೂ ಸಿಎಂ ಗೂ ಭಿನ್ನಾಭಿಪ್ರಾಯ ಇದೆ ಅಂತ ಹೇಳೋರು ಬಿಜೆಪಿಯವರು. ಆ ರೀತಿ ಬೆಳವಣಿಗೆ ಕಾಂಗ್ರೆಸ್ ನಲ್ಲಿ ಇಲ್ಲ. ಅದು ಬಿಜೆಪಿಯ ವ್ಯಾಖ್ಯಾನ ಅಷ್ಟೆ. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ,ಹೈಕಮಾಂಡ್ ಮತ್ತು ಅಧ್ಯಕ್ಷರೂ ಸೇರಿದಂತೆ ಎಲ್ಲರೂ ಸಿದ್ದರಾಮಯ್ಯ ಅವರ ಪರವಾಗಿದ್ದಾರೆ ಯತೀಂದ್ರ ಹೇಳಿದರು.