ಅರಮನೆ ಆವರಣದಲ್ಲಿ ರಥಸಪ್ತಮಿ ಸಂಭ್ರಮ

ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ರಥಸಪ್ತಮಿ ಸಂಭ್ರಮ ಮನೆಮಾಡಿದೆ.

7 ದೇವಾಲಯಗಳ ಉತ್ಸಮೂರ್ತಿಗಳ ಸಮಾಗಮ ವಾಗಿದೆ. ಉತ್ಸವ ಮೂರ್ತಿಗಳ ದರುಶನ ಪಡೆಯಲು ಭಕ್ತರ ದಂಡೇ ಹರಿದು ಬರುತ್ತಿದೆ.

ಮುಂಜಾನೆ 6 ಗಂಟೆಗೆ ಆರಂಭವಾದ ದರುಶನ ಮಧ್ಯಾಹ್ನ 12 ಗಂಟೆ ವರೆಗೂ ಮುಂದುವರೆದಿತ್ತು.

ತ್ರಿನೇಶ್ವರಸ್ವಾಮಿ, ಭುವನೇಶ್ವರಿ, ಗಾಯಿತ್ರಿ, ಲಕ್ಷ್ಮಿನಾರಾಯಣ ಸ್ವಾಮಿ, ಪ್ರಸನ್ನಕೃಷ್ಣ, ವರಾಹ, ಖಿಲೆ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಉತ್ಸವಮೂರ್ತಿಗಳನ್ನ ಅಂಬಾವಿಲಾಸ ಅರಮನೆ ಆವರಣದಲ್ಲಿ ಪ್ರತಿಷ್ಠಾಪಿಸಿ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸೂರ್ಯದೇವ ತನ್ನ ಪಥವನ್ನ ಬದಲಾಯಿಸುವ ದಿನವಾದ ಇಂದು ವಿಶೇಷವಾಗಿ ರಥಸಪ್ತಮಿಯನ್ನ ಆಚರಿಸಲಾಗುತ್ತದೆ.

ಈ ಹಿಂದೆ ರಾಜಮಹಾರಾಜರ ಆಡಳಿತದ ಅವಧಿಯಲ್ಲಿ ಅರಮನೆ ಆವರಣದಲ್ಲಿರುವ ಪ್ರಮುಖ ದೇವಾಲಯಗಳ ಉತ್ಸವ ಮೂರ್ತಿಗಳನ್ನ ಒಂದೆಡೆ ಸೇರಿಸಿ ಭಕ್ತರಿಗೆ ದರುಶನ ಪಡೆಯುವ ವ್ಯವಸ್ಥೆ ಮಾಡಿದ್ದರು.ಈ ಸಂಪ್ರದಾಯ ಇಂದಿಗೂ ಮುಂದುವರೆ ದಿದೆ.