ನಾವು ಯಾವುದಕ್ಕೂ ಹೆದರಲ್ಲ -ಅಶೋಕ್

ಮೈಸೂರು, ಫೆ. 24-ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಘಟನೆ ಖಂಡಿಸಿ ನಾವು ನಡೆಸಲು ಮುಂದಾಗಿರುವ ನಮ್ಮ ಹೋರಾಟವನ್ನು ಹತ್ತಿಕ್ಕಲು ಮೈಸೂರಿನಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ನಾವು ಯಾವುದಕ್ಕೂ ಹೆದರಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಮೈಸೂರಿನಲ್ಲಿ ಅಶೋಕ್ ಅವರು ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮುಸ್ಲೀಮರ ಓಲೈಕೆಯಷ್ಟೆ ಕಾಂಗ್ರೆಸ್ ಉದ್ದೇಶ. ನಮಗೆ ಮತ ಹಾಕಿ ನೀವು ಏನು ಬೇಕಾದರೂ ಮಾಡಿ. ಇದು ಕಾಂಗ್ರೆಸ್ ಸರ್ಕಾರದ ಸ್ಲೋಗನ್. ಮುಸ್ಲೀಂ ಮತಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ಬಂದಾಗ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಈ ಸರ್ಕಾರ ಕಿತ್ತು ಒಗೆಯುವುದೇ ನಮ್ಮ ಉದ್ದೇಶ ಎಂದು ಅಶೋಕ್ ಹೇಳಿದರು.