ಶ್ರೀ ರಾಘವೇಂದ್ರ ಗುರು ಸರ್ವಭೌಮರ ಪಟ್ಟಾಭಿಷೇಕ, ವರ್ಧಂತಿ ಮಹೋತ್ಸವ

ಮೈಸೂರು: ಅಗ್ರಹಾರದ ಉತ್ತರಾದಿ ಮಠದ ಶ್ರೀ ದೇವೇಂದ್ರ ತೀರ್ಥ ಪ್ರತಿಷ್ಠಾನ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಾನ ದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪಟ್ಟಾಭಿಷೇಕ ಹಾಗೂ ವರದಂತಿ ಮಹೋತ್ಸವ ವೈಭವವಾಗಿ ನೆರವೇರಿತು.

ವರ್ಧಂತಿ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಪಂಚಾಮೃತ ಅಭಿಷೇಕ,ಕ್ಷೀರಾಭಿಷೇಕ ನೆರವೇರಿಸ ಲಾಯಿತು.

ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ವೇಳೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ
ನೆರವೇರಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಅವರು,ಗುರುರಾಘವೇಂದ್ರ ರಾಯರು ಕಲಿಯುಗದ ಕಾಮಧೇನು, ಕಲ್ಪತರು ಎಂದೆ ಖ್ಯಾತಿ ಎಂದು ಹೇಳಿದರು.

ನಾಲ್ಕು ಶತಮಾನದ ಹಿಂದೆಯೇ ಜನಿಸಿದ ರಾಯರು ತಿರುಪತಿ ವೆಂಕಟೇಶ್ವರರ ಕೃಪೆಯಿಂದ ಜಾತಿಮತ ಧರ್ಮದ ಬೇಧವಿಲ್ಲದೆ ಸಕಲ ಜೀವರಾಶಿಗಳನ್ನೂ ಸಲುಹುತ್ತಿದ್ದಾರೆ, ಸಶರೀರವಾಗಿ ಬೃಂದಾವನಸ್ಥ ರಾಗಿರುವದರಿಂದ ಕಂಪನ ತರಂಗ ಸ್ಪಂದನ ಪವಾಡ ಗಳಿಸಿದ್ದ ತಪಸ್ ಶಕ್ತಿಯನ್ನು ಭಕ್ತಾಧಿಗಳಿಗೆ ಧಾರೆ ಎರೆದು ಕಷ್ಟಕಾರ್ಪಣ್ಯಗಳನ್ನ ನಿವಾರಿಸಿ ಕೋಟ್ಯಾಂತರ ಭಕ್ತರ ಮನೆಮನದಲಿದ್ದಾರೆ ಎಂದು ಭಕ್ತಿಯಿಂದ ನುಡಿದರು.

ಈ ಸಂದರ್ಭದಲ್ಲಿ ಉತ್ತರಾದಿ ಮಠದ ವ್ಯವಸ್ಥಾಪಕರಾದ ಪಂಡಿತ್ ಅನಿರುದ್ಧ ಆಚಾರ್ ಪಾಂಡುರಂಗಿ, ಮಠದ ಪ್ರಧಾನ ಅರ್ಚಕರಾದ ಹರೀಶ್, ಎಸ್. ಬಿ ವಾಸುದೇವಮೂರ್ತಿ ಮತ್ತಿತರರು ಹಾಜರಿದ್ದರು.