ಮೈಸೂರು:ಜನರನ್ನ ರಕ್ಷಿಸುವ ಪೋಲೀಸರ ಕುಟುಂಬಗಳು ವಾಸಿಸುವ ಬಡಾವಣೆಯಲ್ಲೇ ರಾಬರಿ ನಡೆದಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ.
ಮನೆಗೆ ನುಗ್ಗಿ ಮಹಿಳೆ ಸರ ಕಿತ್ತುಕೊಂಡು ಪರಾರಿ ಆಗಿರುವ ಘಟನೆ ನಡೆದಿದೆ.
ನಗರದ ಆಲನಹಳ್ಳಿ ಬಡಾವಣೆ ಸಮೀಪ ಇರುವ ಪೋಲಿಸ್ ಬಡಾವಣೆ ಎರಡನೇ ಹಂತದಲ್ಲಿ ಮನೆಗೆ ನುಗ್ಗಿ ಮಹಿಳೆ ಸರ ಕಿತ್ತುಕೊಂಡು ಪರಾರಿ ಆಗಿರುವ ಘಟನೆ ನಡೆದಿದೆ.
ರಾತ್ರಿ 9.30ರ ವೇಳೆ ಅಪರಿಚಿತರು ಗಿರೀಶ್ ಎಂಬುವವರ ಮನೆಗೆ ನುಗ್ಗಿ ಮಹಿಳೆ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿ ಆಗಿದ್ದಾರೆ.
ಕಳ್ಳರು ಹೆಲ್ಮೆಟ್, ಮಾಸ್ಕ್ ಧರಿಸಿದ್ದರು. ಮಾರಕಾಸ್ತೃಗಳನ್ನು ಇಟ್ಟುಕೊಂಡಿದ್ದರು ಎಂದು ಹೇಳಲಾಗಿದೆ.
ಸ್ಥಳಕ್ಕೆ ಆಲನಹಳ್ಳಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

