ಮೈಸೂರು: ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದ್ದು,
ಮೈಸೂರು ರಕ್ಷಣಾ ವೇದಿಕೆ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ಹಾಗೂ ಪೆನ್ ನೀಡಿ ಶುಭಕೋರಿದರು.
ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ ಕಾ ಪ್ರೇಮ್ ಕುಮಾರ್ ಹಾಗೂ ಸಂಗಡಿಗರು ಕೃಷ್ಣ ವಿಲಾಸ ರಸ್ತೆಯಲ್ಲಿರುವ ಮಹಾರಾಣಿ ಕಿರಿಯ ಕಾಲೇಜಿನ ಸೆಂಟರ್ ನಲ್ಲಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಗುಲಾಬಿ,ಪೆನ್ ನೀಡಿ ಗುಡ್ ಲಕ್ ಹೇಳಿದರು.
ಈ ವೇಳೆ ಮೈಸೂರಿಗೆ ಉನ್ನತ ಪಲಿತಾಂಶ ಬರಲೆಂದು ಹಾರೈಸಿದ ವೇದಿಕೆ ಸದಸ್ಯರು, ನಿಮ್ಮೊಂದಿಗೆ ನಾವಿದ್ದೇವೆ ಎಂದು ವಿದ್ಯಾರ್ಥಿಗಳಿಗೆ ಅಭಯ ನೀಡಿದರು.
ಈ ವೇಳೆ ಮೈಸೂರು ರಕ್ಷಣಾ ವೇದಿಕೆಯ ಅಧ್ಯಕ್ಷ ಮೈ ಕಾ ಪ್ರೇಮ್ ಕುಮಾರ್ ಮಾತನಾಡಿ,ನಮ್ಮ ಜಿಲ್ಲೆಯಲ್ಲಿ ಸುಮಾರು 39 ಸಾವಿರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.ಅವರಿಗೆ ನಮ್ಮ ಸಂಘ,ಸಂಸ್ಥೆ ವತಿಯಿಂದ ಗುಲಾಬಿ ಹಾಗೂ ಪೆನ್ ಕೊಟ್ಟು ಆತ್ಮ ಸ್ಥೈರ್ಯ ತುಂಬಿ, ದೈರ್ಯ ಹೇಳಿದ್ದೇವೆ ಚೆನ್ನಾಗಿ ಪರೀಕ್ಷೆ ಬರೆಯುವಂತೆ ಶುಭ ಕೋರಿದ್ದೇವೆ ಎಂದು ತಿಳಿಸಿದರು.
ಮೈಸೂರು ರಕ್ಷಣಾ ವೇದಿಕೆಯ ಗುರುರಾಜ್ ಶೆಟ್ಟಿ,ನವೀನ್, ರವಿಚಂದ್ರ, ನಂಜುಂಡಿ, ನಿತಿನ್, ಸಂತೋಷ್, ಪ್ರಮೋದ್, ಮಂಜುನಾಥ್ ಮತ್ತಿತರರು ಹಾಜರಿದ್ದರು.

