ಚಾಮರಾಜನಗರ: ಬೆಳ್ಳಂಬೆಳಿಗ್ಗೆ ಚಾಮರಾಜನಗರ ಜಿಲ್ಲಾ ಆಡಳಿತ ಭವನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು,ಸಿಬ್ಬಂದಿ ಹಾಗೂ ನಗರದ ಜನ ಆತಂಕಕ್ಕೆ ಒಳಗಾದರು.
ಈ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು,ನಮ್ಮ ಜಿಲ್ಲಾಡಳಿತ ಭವನದ ಕಚೇರಿಯ ಅಧಿಕೃತ ಇ ಮೇಲ್ ಐಡಿಗೆ ಬೆಳಿಗ್ಗೆ ಮೇಲ್ ಬಂದಿದೆ ಬಾಂಬ್ ಇಟ್ಟಿರುವುದಾಗಿ ತಿಳಿಸಲಾಗಿದೆ ಎಂದು ಹೇಳಿದರು.
ಪಹಲ್ಗಾಮ್ ದುಶ್ಕೃತ್ಯದ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಟೆನ್ಷನ್ ಇರುವಾಗ ಈ ರೀತಿಯ ಬಾಂಬ್ ಬೆದರಿಕೆ ಕರೆ ಬಂದಿರುವುದರಿಂದ ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತಿಳಿಸಿದರು.
ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿ ಬಾಂಬ್ ಇಟ್ಟಿದ್ದೇವೆ ಅದು 3 ಗಂಟೆಗೆ ಸಿಡಿಯಲಿದೆ ಎಚ್ಚರ ಎಂದು ತಿಳಿಸಲಾಗಿದೆ.ಹಾಗಾಗಿ ತಕ್ಷಣ ಸೆನ್ ಪೊಲೀಸ್ ಠಾಣೆಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಡಿಐಜಿ ಅವರಿಗೆ ಮಾಹಿತಿ ನೀಡಿದ್ದೇವೆ ಅವರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ ಬಾಂಬ್ ತಪಾಸಣೆ ನಡೆಸಲಾಗಿದೆ ಎಂದು ಶಿಲ್ಪಾ ನಾಗ್ ತಿಳಿಸಿದರು.
ಜನತೆ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.