ಮೈಸೂರು: ಯುವ ಭಾರತ್ ಸಂಘಟನೆ ಹಾಗೂ ವೀರ ಸಾವರ್ಕರ್ ಯುವ ಬಳಗದ ವತಿಯಿಂದ ಭಾರತೀಯರ ಸುರಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಲಾ ಯಿತು.
ಈ ವೇಳೆ ಆಪರೇಷನ್ ಸಿಂದೂರ ಯಶಸ್ವಿಗೊಳ್ಳಲಿ, ಭಾರತದ ಯೋಧರ ಜೊತೆ ನಾವು ಎಂಬ ಘೋಷಣೆ ಕೂಗಿ ಗನ್ ಹೌಸ್ ವೃತ್ತದಲ್ಲಿರುವ ಶ್ರೀ ಕಾರ್ಯ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಭಾರತದ ಧ್ವಜ ಹಿಡಿದು ಯೋಧರ ಜೊತೆ ನಾವು ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಜಯಕಾರ ಕೂಗಿದರು.
ಶಾಸಕ ಟಿ ಎಸ್ ಶ್ರೀವತ್ಸ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಹಣೆಗೆ ತಿಲಕ ಪರಸ್ಪರ ಇಡುವ ಮೂಲಕ ಕೇಂದ್ರದ ದಿಟ್ಟ ಹೆಜ್ಜೆ ಆಪರೇಷನ್ ಸಿಂದೂರ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಪ್ರತಾಪ್ ಸಿಂಹ ಮಾತನಾಡಿ, ಪಹಲ್ಗಾಮ್ ದಾಳಿಗೆ ದಿಟ್ಟ ಉತ್ತರ ನೀಡಿದ ನಮ್ಮ ಹೆಮ್ಮೆಯ ಸೈನಿಕರು ಉಗ್ರರ 9 ನೆಲೆಗಳನ್ನು ಧ್ವಂಸ ಮಾಡಿ ಬಂದಿದ್ದಾರೆ ಎಂದು ಕೊಂಡಾಡಿದರು.
ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬಂದು ದೇಶದ ಪ್ರಧಾನಿಯಾಗಿರುವ ನಮ್ಮ ಹೆಮ್ಮೆಯ ನರೇಂದ್ರ ಮೋದಿಯವರು ಆಪರೇಷನ್ ಸಿಂಧೂರ ಮಾಡುವ ಮೂಲಕ ಪಹಲ್ಗಾಮ್ ನಲ್ಲಿ ನಡೆದ ಹತ್ಯೆಗೆ ತಕ್ಕ ಕ್ರಮ ಕೈಗೊಂಡಿದ್ದಾರೆ.
ಮೋದಿಯವರು ಬರೀ ಘೋಷಣೆಗೆ ಭಾಷಣಕ್ಕೆ ಸೀಮಿತವಾಗಿಲ್ಲ,ನುಡಿದಂತೆ ನಡೆಯುತ್ತಾರೆ,ದಿಟ್ಟ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಆಪರೇಷನ್ ಸಿಂಧೂರ ಸಾಕ್ಷಿಯಾಗಿದೆ ಎಂದು ಹೇಳಿದರು.
ಈ ಮೂಲಕ ನಮ್ಮ ಹೆಮ್ಮೆಯ ಸೈನಿಕರ ಜೊತೆ ನರೇಂದ್ರ ಮೋದಿಯವರು ನಿಂತಿದ್ದಾರೆ.ನಾವೆಲ್ಲರೂ ಸೈನಿಕರಿಗೆ ಬೆಂಬಲ ಸೂಚಿಸೋಣ ಎಂದು ಪ್ರತಾಪ್ ಸಿಂಹ ಕರೆ ನೀಡಿದರು.
ಈ ವೇಳೆ ನಗರಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ, ಯುವ ಭಾರತ್ ಸಂಘಟನೆಯ ಅಧ್ಯಕ್ಷ ಜೋಗಿ ಮಂಜು, ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್, ಬಿಜೆಪಿ ಮುಖಂಡ ರಾದ ಆರ್ ಪರಮೇಶ್ ಗೌಡ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಕನ್ನಡ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ವಿಶೇಷ ಚೇತನ ಕ್ರೀಡಾಪಟು ಅಲೋಕ್ ಆರ್ ಜೈನ್, ಬಿಜೆಪಿ ಮುಖಂಡರಾದ ಪ್ರದೀಪ್, ಬೈರತಿ ಲಿಂಗರಾಜು, ಅಮಿತ್,ಸಂದೀಪ್, ಧರ್ಮೇಂದ್ರ,ಸುಚೇಂದ್ರ, ಮಿರ್ಲೆ ಪನೀಶ್, ಗಗನ್, ಮಹಾನ್ ಶ್ರೇಯಸ್, ಗೈಡ್ ಚಂದ್ರು, ಮತ್ತಿತರರು ಹಾಜರಿದ್ದರು.