ಪತ್ನಿಯ ಕೊಂದು ತಲೆ ಮರೆಸಿಕೊಂಡಿದ್ದ ಗಿರೀಶ್ ಬಂದನ

(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)

ಚಾಮರಾಜನಗರ: ಪಟ್ಟಣ ಪೊಲೀಸ್ ಠಾಣೆ ಸಮೀಪದಲ್ಲೇ ಪತ್ನಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಗಿರೀಶ್‌ನನ್ನು ಚಾಮರಾಜನಗರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಜೂನ್ 3ರಂದು ಪಟ್ಟಣ ಠಾಣೆಯ ಸಮೀಪವೇ ಪತ್ನಿ ವಿದ್ಯಾಳನ್ನು ಮಚ್ಚಿನಿಂದ ಕೊಲೆಗೈದು ಆರೋಪಿ ಗಿರೀಶ್ ಪರಾರಿಯಾಗಿದ್ದ.

ಪತ್ನಿ ಕೊಲೆಗೈದು ಆಕೆಯ ಪ್ರಿಯಕರನನ್ನ ಮುಗಿಸೆಯೇ ಪೊಲೀಸರಿಗೆ ಶರಣಾಗೋದು ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದ.

ಪೊಲೀಸರು ಕೊಲೆ ಆರೋಪಿಗೆ ಶೋದ ಕಾರ್ಯ ನಡೆಸಿದ್ದರು.ಇದರ ಮದ್ಯೆ ಠಾಣೆಯ ಇಬ್ಬರು ಅಮಾನತು ನಂತರ ತೆರವಿನ ಡ್ರಾಮಾ ಪ್ರಕ್ರಿಯೆ ಕೂಡ ನಡೆದಿದ್ದು ವಿಪರ್ಯಾಸವಾಗಿತ್ತು.

ಕೊಲೆ ಆರೋಪಿ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು.ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಇರುವ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು ಗಿರೀಶನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆ ಮಾಡಿದ ಬಳಿಕ ಆರೋಪಿ ಗಿರೀಶ್ ತೋಟ, ಜಮೀನುಗಳಲ್ಲಿ ತಲೆಮರೆಸಿಕೊಂಡು ನಿರಂತರವಾಗಿ ಸ್ಥಳ ಬದಲಾಯಿಸುತ್ತಿದ್ದ.

ಕೊನೆಗೂ ಆರೋಪಿ ಬಂಧನವಾಗಿದ್ದು ತನಿಖೆ ನಡೆಯುತ್ತಿದೆ. ಹೆಚ್ಚಿನ ವಿಚಾರಣೆ ಅಗತ್ಯ ಬಿದ್ದರೆ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯುವ ಸಾದ್ಯತೆ ಇದೆ.

ಪಟ್ಟಣ ಪೊಲೀಸ್ ಠಾಣೆಯ ಪ್ರಬಾರ ಇನ್ಸ್ ಪೆಕ್ಟರ್ ಸಾಗರ್ ಅವರಿಗೆ ಆರೋಪಿ ಪತ್ತೆ ಕಾರ್ಯ ವಹಿಸಿಕೊಡಲಾಗಿತ್ತು.ಇವರ ಜೊತೆಗೆ ಇಬ್ಬರು ಎಎಸ್ಐ ಗಳು ಕೂಡ ಆರೋಪಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ಇಲಾಖೆಗಿದ್ದ ತಲೆನೋವು ಕಡಿಮೆಗೊಳಿಸಿದ್ದಾರೆ ಎಂದರೆ ತಪ್ಪಾಗಲಾರದು