ಮೈಸೂರು: ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದು 11 ವರ್ಷಗಳಾಗಿದೆ,ಅವರ ಸರ್ಕಾರ ಪ್ರಚಾರ ದಿಂದ ಅಷ್ಟೇ ಇದೆ, ಈ ಸರ್ಕಾರಕ್ಕೆ 10ಕ್ಕೆ ಶೂನ್ಯ ಅಂಕ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ನೋಟು ಅಮಾನ್ಯೀಕರಣದಿಂದ ಯಾರಿಗೆ ಅನುಕೂಲ ಆಗಿದೆ ಎಂದು ಪ್ರಶ್ನಿಸಿದರು.
ಅಚ್ಚೇ ದಿನ ಬರುತ್ತೆ ಅಂದರು ಯಾರಿಗೆ ಅನುಕೂಲ ಆಯ್ತು, ಪ್ರತಿ ವರ್ಷ ಎರೆಡು ಕೋಟಿ ಉದ್ಯೋಗ ಅಂದ್ರು ಉದ್ಯೋಗ ಕೊಟ್ಟಿದಾರಾ ಎಂದು ಪ್ರಶ್ನೆಗಳ ಸುರಿಮಳೆಗೈದರು ಸಿಎಂ.
ಏನೇನೆಲ್ಲಾ ಭರವಸೆ ಕೊಟ್ಟಿದ್ದಾರೆ ಒಂದನ್ನೂ ಈಡೇರಿ ಸಲಿಲ್ಲ,ಮೋದಿ ಸರ್ಕಾರಕ್ಕೆ ಮಾಧ್ಯಮದವರು ಹೆಚ್ಚು ಪ್ರಚಾರ ಕೊಟ್ಟಿದ್ದಾರೆ ಎಂದು ಹೇಳಿದರು.
ಗ್ಯಾರೆಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗು ತ್ತದೆ ಅಂತ ಹೇಳಿ ಅವರೇ ನಮ್ಮ ಯೋಜನೆಯನ್ನು ಕಾಫಿ ಮಾಡಿದರು ಎಂದು ಸಿಎಂ ಟಾಂಗ್ ನೀಡಿದರು.
ಗುಜರಾತ್ ಸಿಎಂ ಆಗಿದ್ದಾಗ ಕ್ರಾಂತಿಕಾರಕ ಟ್ಯಾಕ್ಸ್ ಸಂಗ್ರಹ ಮಾಡುತ್ತೇ ಅಂದಿದ್ದರು, ಇವರೇ ಪಿಎಂ ಆಗಿದ್ದಾರೆ ಏನು ಮಾಡಿದರು, 14ನೇ ಹಣಕಾಸು ಆಯೋಗದಿಂದ ದುಡ್ಡು ಕೊಡ್ತೀನಿ ಅಂದಿದ್ದರಿ ಕೊಟ್ಟಿದಾರಾ ಇಲ್ಲ,ಏನೂ ಕೊಡಲಿಲ್ಲ, ರಾಜ್ಯ ಬಿಜೆಪಿಗರು ಇದನ್ನೆಲ್ಲ ಕೇಳುವುದಿಲ್ಲ, ನಮ್ಮ ಬಗ್ಗೆ ಬರೀ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

