ಮೈಸೂರು: ಕೆಎಸ್ ಆರ್ ಟಿಸಿ ಬಸ್ ಹರಿದು ಹಿರಿಯ ನಾಗರೀಕರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಶ್ರೀರಾಂಪುರದಲ್ಲಿ ಈ ಅವಘಡ ನಡೆದಿದ್ದು,ಶ್ರೀರಾಂಪುರದ ಪುರುಷೋತ್ತಮಯ್ಯ (71) ಮೃತಪಟ್ಟ ದುರ್ದೈವಿ.
ಪುರುಷೋತ್ತಮಯ್ಯ ಅವರು ಮನೆಯಿಂದ ಸ್ಕೂಟರ್ ನಲ್ಲಿ ಹೊರಟು ಸ್ವಲ್ಪ ದೂರ ಬಂದಿದ್ದರಷ್ಟೆ.ಅಷ್ಟರಲ್ಲಿ ಹಿಂದಿನಿಂದ ಬಂದ ಕೆಎಸ್ಆರ್ ಟಿಸಿ ಬಸ್
ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.
ಆಗ ಸ್ಕೂಟರ್ ಸಹಿತ ಅವರು ಕೆಳಗೆ ಬಿದ್ದಿದ್ದಾರೆ,ಆಗ ಅವರ ತಲೆಯ ಮೇಲೆ ಬಸ್ ಹರಿದಿದೆ,ಇದರಿಂದ ಪುರುಷೋತ್ತಮಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪುರುಷೋತ್ತಮ್ಮಯ್ಯ ಅವರು ಹಾಲಿನ ಬೂತ್ ನಿಂದ ಹಾಲು ತೆಗೆದುಕೊಂಡು ಮನೆಗೆ ಹೋಗುವಾಗ ಈ ದುರ್ಘಟನೆ ನಡೆದಿದೆ.

