ಪಂಪ್ ಸೆಟ್ ಉಪಕರಣಗಳ ಕಳುವು ಮಾಡಿದ ಕಿಡಿಗೇಡಿಗಳು

ಮೈಸೂರು: ಜಮೀನಿನಲ್ಲಿದ್ದ ಪಂಪ್ ಸೆಟ್ ಉಪಕರಣಗಳನ್ನು ಕಿಡಿಗೇಡಿಗಳು ದೋಚಿರುವ ಘಟನೆ ಜಿಲ್ಲೆಯ ಎಚ್ ಡಿ ಕೋಟೆ ತಾಲೂಕು ಮೊತ್ತ ಗ್ರಾಮದಲ್ಲಿ ನಡೆದಿದೆ.

ಸ್ಟಾರ್ಟರ್, ವಿದ್ಯುತ್ ಫೀಸ್ ಜೆಟ್ ಕಳ್ಳತನ ಮಾಡಲಾಗಿದೆ.

ರೈತ ಲೋಕೇಶ್ ಎಂಬುವವರ ಜಮೀನಿನಲ್ಲಿ ಈ ಕಳ್ಳತನ ನಡೆದಿದೆ.ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ ಕೊರೆಸಿ ಉಪಕರಣಗಳನ್ನ ಅಳವಡಿಸಿದ್ದರು.

ಇದೀಗ ರೈತ ಕುಟುಂಬ ಸಂಕಷ್ಟಕ್ಕೆ‌ ಸಿಲುಕಿದೆ.
ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಅಂತರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.