ಮೈಸೂರು: ಮಕ್ಕಳ ಜೊತೆ ಇದ್ದ ಗೃಹಿಣಿಯ ಮನೆಗೆ ನುಗ್ಗಲು ಹೊಂಚು ಹಾಕಿದ್ದ ಕಳ್ಳನನ್ನು ಸಾರ್ವಜನಿಕರೆ ಹಿಡಿದ ಘಟನ್ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.
ಕಳನನ್ನು ಪೊಲೀಸರು ಬಂಧಿಸಿದ್ದು,ಕಂಬಿ ಎಣಿಸಿದ್ದಾನೆ.
ನಂಜನಗೂಡಿನ ಎಂ.ಎಂ.ಬಡಾವಣೆಯಲ್ಲಿ ಘಟನೆ ನಡೆದಿದ್ದು, ಹುಲ್ಲಹಳ್ಳಿಯ ನಂಜೀಪುರ ಗ್ರಾಮದ ಶಿವಪಾದ ಸಿಕ್ಕಿಬಿದ್ದ ಕಳ್ಳ.
ಬುಧವಾರ ರಾತ್ರಿ 9 ಗಂಟೆಯಲ್ಲಿ ಕಳ್ಳ ವೀರಮಣಿ ಎಂಬುವರ ಮನೆ ಕಾಂಪೌಂಡ್ ಹಾರಿ ಬಂದು ಅವಿತುಕೊಂಡು ಒಳಗೆ ನುಗ್ಗಲು ಹೊಂಚು ಹಾಕಿದ್ದ.ಅದನ್ನ ನೋಡಿದ ಗೃಹಿಣಿ ಸೆಲ್ವಿ ಅವರು ಕೂಗಿಕೊಂಡಿದ್ದಾರೆ.
ತಕ್ಷಣ ಅಕ್ಕಪಕ್ಕದ ನಿವಾಸಿಗಳು ಓಡಿಬಂದು ಖದೀಮನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿ ದ್ದಾರೆ.
ಈ ಹಿಂದೆಯೂ ಇದೇ ಕಳ್ಳ ಕಳ್ಳತನಕ್ಕೆ ಯತ್ನಿಸಿ ತಪ್ಪಿಸಿಕೊಂಡಿದ್ದ,ನನ್ನ ಪತಿ ಬರದೇ ಇದ್ದಿದ್ದರೆ ನಾನು ಕೊಲೆ ಆಗುತ್ತಿದ್ದೆ.ಇದು ಮೊದಲನೇ ಸಲ ಅಲ್ಲ,ಹಿಂದೆಯೂ ಕುತ್ತಿಗೆಗೆ ಚಾಕು ಹಿಡಿದಿದ್ದ,ನಮಗೆ ರಕ್ಷಣೆ ಬೇಕು ಎಂದು ಸೆಲ್ವಿ ಅವರು ಮನವಿ ಮಾಡಿದ್ದಾರೆ
ಕಳ್ಳನ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಬಡಾವಣೆಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಎಂ.ಎಂ.ಬಡಾವಣೆ ಜನತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

