ಮೈಸೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸರು ಉಪನ್ಯಾಸಕರೊಬ್ಬರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.
ಮೈಸೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ದೂರು ನೀಡಿದ್ದು,ಭರತ್ ಭಾರ್ಗವ ಎಂಬ ಉಪನ್ಯಾಸಕನ ವಿರುದ್ದ ಎಫ್ ಐ ಆರ್ ದಾಖಲು ಮಾಡಿಕೊಂಡು ಬಂಧಿಸಲಾಗಿದೆ.
ಬಿ ಎನ್ ಎಸ್ ಸೆಕ್ಷನ್ 126 (2) 75 (2) 351 (2) ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಪ್ರತಿನಿತ್ಯ ಈ ಉಪನ್ಯಾಸಕ ಕಿರುಕುಳ ನೀಡುತ್ತಿದ್ದರೆಂದು ವಿದ್ಯಾರ್ಥಿನಿ ಆರೋಪ ಮಾಡಿದ್ದಾರೆ.
ಮಾರ್ಕ್ಸ್ ಹೆಚ್ಚು ನೀಡುತ್ತೇನೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ಆಮಿಷ ಒಡ್ಡಿ, ಹೊರಗಡೆ ಪಬ್‌ಗೆ ಹೋಗಿ ಮಜಾ ಮಾಡೋಣ ಬಾ ಅಂತಾ ಕರೆಯುತ್ತಿದ್ದನೆಂದು ಮಹಿಳಾ ಉಪನ್ಯಾಸಕರಿಗೆ ವಿಧ್ಯಾರ್ಥಿನಿ ದೂರು ನೀಡಿದ್ದರು.
ದೂರು ನೀಡಿದ ಕಾರಣ ಭರತ್ ಭಾರ್ಗವ್ ಕರೆ ಮಾಡಿ ಬೆದರಿಕೆ ಕೂಡಾ ಹಾಕಿದ್ದ.ಜತೆಗೆ ವಿದ್ಯಾರ್ಥಿನಿ ಅಂಗಾಂಗಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ.ಅಲ್ಲದೆ ತಾನು ಹೇಳಿದಂತೆ ಕೇಳದಿದ್ದರೆ ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನೆಂದು ಆಕೆ ದೂರಿದ್ದಾರೆ.
ಈಗ ಉಪನ್ಯಾಸಕ ಕಂಬಿ ಎಣಿಸುವಂತಾಗಿದೆ.

