ಠಾಣೆಯಲ್ಲೇ ಮಹಿಳಾ ಪೇದೆ ಮೇಲೆ ಹಲ್ಲೆ:ಎಫ್ ಐ ಆರ್

ಮೈಸೂರು: ಕರ್ತವ್ಯನಿರತ ಮಹಿಳಾ ಪೇದೆ ಮೇಲೆ ಠಾಣೆಯಲ್ಲೇ ಮಹಿಳೆಯೊಬ್ಬಳು ಅವಾಚ್ಯ ಶಬ್ದ ಬಳಕೆ ಮಾಡಿ ಹಲ್ಲೆ ನಡೆಸಿದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಹಲ್ಲೆ ನಡೆಸಿದ ಮಹಿಳೆ ವಿರುದ್ದ ಈಗ ಎಫ ಐ ಆರ್‌ ದಾಖಲಾಗಿದೆ.ಲತಾ ಎಂಬಾಕೆ ಠಾಣೆಯಲ್ಲೇ ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ್ದಾಳೆ.

ರಂಜಿತಾ ಎಂಬುವರ ಜೊತೆ ಲತಾ ಹಣಕಾಸಿನ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಇಬ್ಬರೂ ಠಾಣೆಗೆ ಬಂದಿದ್ದಾರೆ.

ಈ ಸಂಬಂಧ ಎಸ್.ಹೆಚ್.ಒ.ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ವಾಮಿ ಅವರು ವಿಚಾರಣೆ ಮಾಡಿದ್ದಾರೆ.ನಂತರ ಠಾಣೆಯಿಂದ ಹೊರ ಆವರಣಕ್ಕೆ ಬಂದ ಇಬ್ಬರು ಮಹಿಳೆಯರು ಗಲಾಟೆ ಮಾಡಿ ಕಿರುಚಾಡಿದ್ದಾರೆ.

ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಸರಸ್ವತಿ ರವರು ಗಲಾಟೆ ಮಾಡದಂತೆ ಮನವಿ ಮಾಡಿದ್ದಾರೆ.ಆಗ ಲತಾ ಎಂಬಾಕೆ ಸರಸ್ವತಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾಳೆ.

ನಂತರ ನೇರವಾಗಿ ಇನ್ಸ್ಪೆಕ್ಟರ್ ಚೇಂಬರ್ ಗೆ ಹೋಗಿ ಕುಳಿತಿದ್ದಾಳೆ,ಇನ್ಸ್ಪೆಕ್ಟರ್ ಇಲ್ಲದ ಕಾರಣ ಪಿಎಸ್ಸೈ ಚೇಂಬರ್ ನಲ್ಲಿ ಕುಳಿತುಕೊಳ್ಳುವಂತೆ ಸರಸ್ವತಿ ಅವರು ಹೇಳಿದಾಗ ಕೋಪಗೊಂಡ ಮಹಿಳೆ ಸಿಬ್ಬಂದಿಗಳ ಮುಂದೆಯೇ ಏಕಾಏಕಿ ಸರಸ್ವತಿ ಅವರ ಮುಖ,ಕೈ,ಹಾಗೂ ಕಣ್ಣಿನ ಮೇಲೆ ಹಲ್ಲೆ ನಡೆಸಿ ದುರ್ವರ್ತನೆ ಪ್ರದರ್ಶಿಸಿದ್ದಾರೆ.

ವಿಷಯ ಗೊತ್ತಾಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಠಾಣೆಯಲ್ಲೇ ಒಬ್ಬ ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದರೂ ಆಕೆಯನ್ನ ಏಕೆ ಅರೆಸ್ಟ್ ಮಾಡಿಲ್ಲವೆಂದು ಪ್ರಶ್ನಿಸಿದ್ದಾರೆ.

ಠಾಣೆಯಲ್ಲಿ ಸಿಬ್ಬಂದಿಗಳಿಗೇ ರಕ್ಷಣೆ ಇಲ್ಲದಿದ್ದರೆ ಹೇಗೆ ಎಂದು ಜನತೆ ಕಿಡಿಕಾರಿದ್ದಾರೆ.