ಮೈಸೂರು: ಸದ್ಯದ ಪರಿಸ್ಥಿತಿಯಲ್ಲಿ ದೇಶಕ್ಕೆ, ರಾಜ್ಯಕ್ಕೆ ಯತ್ನಾಳ್ ಅಂತವರ ಅವಶ್ಯಕತೆ ಇದೆ ಎಂದು ಹಿರಿಯ ವಕೀಲ ಎಚ್.ಎನ್.ವೆಂಕಟೇಶ್ ಹೇಳಿದರು.
ಹಿಂದೂ ಜಾಗೃತಾ ವೇದಿಕೆ ಮೈಸೂರಿನ ಕಲಾ ಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಸನಾತನ ಧರ್ಮ ಅಳಿವಿನಂಚಿನಲ್ಲಿದೆ, ಅದನ್ನು ಪ್ರಶ್ನೆ ಮಾಡುವವರೇ ಇಲ್ಲದಂತಾಗಿದೆ
ಎಂದು ಬೇಸರ ವ್ಯಕ್ತಪಡಿಸಿದರು.
ದೇಶದಲ್ಲಿ ಒಂದು ಕಡೆ ಒಂದು ಧರ್ಮದ ವಿದ್ಯಾವಂತರು, ವೈದ್ಯರೇ ಬಾಂಬ್ ಇಡುವ ಕೆಲಸ ಮಾಡುತ್ತಿದ್ದಾರೆ. ಇದನ್ನು ತಡೆಯುವುದಕ್ಕೆ , ಅಂತಹವರನ್ನು ದೂರ ಇಡಲು ಯತ್ನಾಳ್ ಅಂತಾ ನಾಯಕರು ದೇಶಕ್ಕೆ ಬೇಕಾಗಿದ್ದಾರೆ,ಯತ್ನಾಳ್ ಅಂತವರು
ದೇಶದಲ್ಲಿ ಹೆಚ್ಚು ಜನ ಹುಟ್ಟಬೇಕು
ಎಂದು ತಿಳಿಸಿದರು.
ಅನ್ಯ ಧರ್ಮದ ವೈದ್ಯರ ಬಗ್ಗೆ ಅನುಮಾನ ಮೂಡುವಂತ ಪರಿಸ್ಥಿತಿ ಇದೆ. ಕೆಲವರಿಗೆ ಆರ್ ಎಸ್ ಎಸ್ ಟೀಕೆ ಮಾಡುವುದೇ ಪ್ರಮುಖ ಉದ್ದೇಶವಾಗಿದೆ. ಇದು ನಿಲ್ಲಬೇಕು. ಇದೆಲ್ಲಾ ನಿಲ್ಲಬೇಕಾದರೆ ಯತ್ನಾಳ್ ಅವರು ಈ ರಾಜ್ಯ ಸಿಎಂ ಆಗಬೇಕು ಎಂದು ಎಚ್.ಎನ್.ವೆಂಕಟೇಶ್ ಆಶಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗಿಯಾಗಿದ್ದರು.
ಯೋಗಾನರಸಿಂಹ ಸ್ಟಾಮಿ ದೇಗುಲದ ಡಾ ಭಾಷ್ಯಂ ಸ್ವಾಮೀಜಿ, ಹಿರಿಯ ವಕೀಲ ಎಂ ಡಿ ಹರೀಶ್ ಕುಮಾರ್ ಹೆಗ್ಡೆ, ಮಲ್ಲೇಶ್, ಭಾಸ್ಕರ್ ನಾಯ್ಡು, ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

