ಮೈಸೂರು: ಜಿ ಆರ್ ಎಸ್ ಫ್ಯಾಂಟಸಿ ಪಾರ್ಕ್ ನ ಎಂ ಡಿ ಮತ್ತು ಜಿ ಎಂ ವಿರುದ್ಧ ಎಫ್ ಐ ಆರ್ ದಾಖಲಾ ಗಿದೆ.
ಈ ಫ್ಯಾಂಟಸಿ ಪಾರ್ಕ್ ನ ಆಟಗಳಲ್ಲಿ ಲೋಪ ಕಂಡು ಬಂದು ವ್ಯಕ್ತಿಯೊಬ್ಬರ ಕಾಲು ಯಂತ್ರಗಳ ಮಧ್ಯೆ ಸಿಲುಕಿ ಎರಡು ಬೆರಳುಗಳನ್ನ ಕಳೆದುಕೊಂಡಿದ್ದಾರೆ.
ದೆಹಲಿ ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಅಸೆಸರ್ ವಿಶಾಂತ್ ಯಾದವ್ ಬೆರಳುಗಳನ್ನ ಕಳೆದುಕೊಂಡ ವರು.
ಶಾಶ್ವತ ಅಂಗವಿಕಲರಾದ ಹಿನ್ನಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ವಿಶಾಂತ್ ಯಾದವ್ ಜಿ ಆರ್ ಎಸ್ ಫ್ಯಾಂಟಸಿ ಪಾರ್ಕ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಜನರಲ್ ಮ್ಯಾನೇಜರ್ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಕ್ಟೋಬರ್ ನಲ್ಲಿ ಮೈಸೂರಿಗೆ ಬಂದಿದ್ದ ವಿಶಾಂತ್ ಯಾದವ್ ತಮ್ಮ ಸಹೋದರನ ಜೊತೆ GRS ಫ್ಯಾಂಟಸಿ ಪಾರ್ಕ್ ಗೆ ಆಟವಾಡಲು ತೆರಳಿದ್ದಾರೆ.
ಈ ವೇಳೆ ಸೂಪರ್ ಡ್ರಾಪರ್ ವಾಟರ್ ಸ್ಲೈಡರ್ ನಲ್ಲಿ ಆಟವಾಡುವ ವೇಳೆ ಯಂತ್ರದ ಮಧ್ಯೆ ಕಾಲುಗಳು ಸಿಲುಕಿವೆ.ತೀವ್ರ ಗಾಯಗೊಂಡ ವಿಶಾಂತ್ ಯಾದವ್ ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಘಟನೆಯಲ್ಲಿ ವಿಶಾಂತ್ ಯಾದವ್ ಎರಡು ಬೆರಳುಗಳನ್ನ ಶಾಶ್ವತವಾಗಿ ಕಳೆದುಕೊಂಡಿ ದ್ದಾರೆ.ಸುರಕ್ಷಾ ಕ್ರಮ ಅನುಸರಿಸದೆ ದೋಷಪೂರಿತ ಯಂತ್ರದಿಂದಾಗಿ ತಾವು ಶಾಶ್ವತ ಅಂಗವಿಕಲನಾಗ ಬೇಕಾಯಿತು ಎಂದು ಆರೋಪಿಸಿ ಕಾನೂನು ಕ್ರಮ ಜರುಗಿಸುವಂತೆ ಎಂಡಿ ಹಾಗೂ ಜಿಎಂ ವಿರುದ್ದ ಅವರು ಪ್ರಕರಣ ದಾಖಲಿಸಿದ್ದಾರೆ.

