ಚಾಮರಾಜನಗರ ಎಸ್ಪಿ,ಡಿಸಿ ವರ್ಗಾವಣೆ ಮಾಡಿದ ಸರ್ಕಾರ

(ವರದಿ: ರಾಮಸಮುದ್ರ ಎಸ್‌.ವೀರಭದ್ರಸ್ವಾಮಿ)

ಚಾಮರಾಜನಗರ: ಪೊಲೀಸ್ ವರಿಷ್ಟಾದಿಕಾರಿ ಕವಿತಾ ಹಾಗೂ ಜಿಲ್ಲಾದಿಕಾರಿ ಶಿಲ್ಪನಾಗ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಶ್ರೀರೂಪಾ ಅವರನ್ನು ಸರಕಾರ ನೇಮಿಸಿ ಆದೇಶ ಹೊರಡಿಸಿದೆ.

ಶ್ರೀರೂಪಾ ಅವರು ಪ್ರಸ್ತುತ ಪಶುಪಾಲನಾ ಇಲಾಖೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸು ತ್ತಿದ್ದರು.

ಅವರು 2018ನೇ ಕರ್ನಾಟಕ ಬ್ಯಾಚ್‌ನ ಐ ಎ ಎಸ್ ಅಧಿಕಾರಿಯಾಗಿದ್ದಾರೆ. ಚಾಮರಾಜ ನಗರ ಜಿಲ್ಲಾಧಿಕಾರಿಯಾಗಿದ್ದ ಸಿ.ಟಿ. ಶಿಲ್ಪಾ ನಾಗ್ ಅವರನ್ನು ಬೆಂಗಳೂರಿನ ಪಶುಪಾಲನಾ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಅವರು ಸರ್ಕಾರದ ಪಂಚ ಕಲ್ಯಾಣ ಯೋಜನೆ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರಾಗಿದ್ದರು.

ಪೊಲೀಸ್ ವರಿಷ್ಟಾದಿಕಾರಿ ಬಿ.ಟಿ ಕವಿತಾ ಅವರ ಸ್ಥಾನಕ್ಕೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮುತ್ತುರಾಜು ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.

ಮುತ್ತುರಾಜು ಅವರು ಬೆಂಗಳೂರು ಮೆಟ್ರೋಪಾಲಿಟಿನ್ ಟಾಸ್ಕ್‌ಫೋರ್ಸ್ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸು ತ್ತಿದ್ದರು. ಇವರು 2014ನೇ ಕರ್ನಾಟಕ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.ಹಿಂದೆ ಇವರು ಚಾಮರಾಜನಗರ ಎಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಹಾಲಿ ಚಾ.ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಯಾಗಿದ್ದ ಡಾ.ಬಿ.ಟಿ.ಕವಿತಾ ಅವರನ್ನು ಬೆಂಗಳೂರಿನ ಸಿಐಡಿ ವಿಭಾಗದ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಚಾಮರಾಜನಗರ ಪೊಲಿಸ್ ಇಲಾಖೆ ವ್ಯಾಪ್ತಿಯಲ್ಲಿ ಕ್ಲಬ್ ಗಳ ಬಗ್ಗೆ ಆಗಾಗ ದೂರುಗಳು ಬಂದರೂ ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಸಾದ್ಯವಾಗದೆ ಇದ್ದರೂ ಕೆಲವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದ ಉದಾಹರಣೆಗಳು ಇದ್ದವು‌.

ಗ್ರಾಮಾಂತರ ಭಾಗಗಳಲ್ಲಿ ಅಕ್ರಮ ಮದ್ಯ,ಜೂಜಾಟಕ್ಕೆ ಕಡಿವಾಣ ಹಾಕಿ ಅತಿ ಹೆಚ್ಚು ಪ್ರಕರಣ ದಾಖಲಿಸಿದ್ದಾರೆ.ಇಲಾಖೆಯ ಮೇಲಧಿಕಾರಿ ಆದೇಶದಂತೆ ಎಸ್ಸಿಎಸ್ಟಿ ಸಬೆ ಅತಿ ಹೆಚ್ಚು ನಡೆಸಿದವರಲ್ಲಿ ಮೊದಲಿಗರು.

ನೂತನ ಕವಾಯತು ಮೈದಾನ,ಹುತಾತ್ಮರ ಸ್ಮಾರಕ, ಸ್ವಾಗತ ಕಮಾನು ನಿರ್ಮಾಣ, ದೈನಂದಿನ ಚಾರಣ, ತಪ್ಪೆಸಗಿದ ಸಿಬ್ಬಂದಿಯ ಮೇಲೆ ಖಡಕ್ ಕ್ರಮ ಮೇಲಾದಿಕಾರಿಗಳ ಆದೇಶವಾಗಿ ಪಾಲನೆ, ಆಡಳಿತದಲ್ಲಿ ಸಾಕಷ್ಟು ಬದಲಾವಣೆ ತಂದ ಹಾಗೂ ಸಿಎಂ ಬಂದೋಬಸ್ತ್, ಗಣಪತಿವಿಸರ್ಜನೆ,ಹನುಮ ಜಯಂತಿಗೆ ಯಾವುದೆ ಲೋಪವಿಲ್ಲದೆ, ಸಂಚಾರ ನಿಯಂತ್ರಣ ವ್ಯವಸ್ಥೆಗೆ ತಮ್ಮನ್ನು ತಾವು ನಿಯೋಜಿಸಿ ಮುಂಚೂಣಿಯಲ್ಲಿ ಇದ್ದು ಇಲಾಖಾ ಕಾರ್ಯ ವೈಖರಿಯಲ್ಲಿ ದಕ್ಷತೆ ಮೆರೆದವರಲ್ಲಿ ಪ್ರಚಾರ ಬಯಸದ,ಮಾತು ಕಡಿಮೆ ಮಾಡಿ ಕೆಲಸ ಹೆಚ್ಚು ಮಾಡಿ ತೋರಿದವರಲ್ಲಿ ಕವಿತಾ ಅವರು ಪೊಲೀಸ್ ಅದೀಕ್ಷಕರೂ ಆಗಿದ್ದರು.