ಕೊಳ್ಳೇಗಾಲ: ರಕ್ತಚಂದನ ಮರದ 8 ತುಂಡುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನು ಕೊಳ್ಳೆಗಾಲ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಜಯಚಂದ್ರ.ಕೆ (49) (ಹಾಲಿವಾಸ ಬೆಂಗಳೂರಿನ ಜಯನಗರ,), ಬೆಂಗಳೂರಿನ ಯಶವಂತಪುರ, ಸುಮನ್. ಎಸ್, (28), ಬೆಂಗಳೂರಿನ ಬಸವೇಶ್ವರನಗರದ ಬೋವಿ ಕಾಲೋನಿಯ ಹರೀಶ.ಎನ್ (36 ), (ಹಾಲಿವಾಸ ಕಾಮಾಕ್ಷಿಪಾಳ್ಯದ ವೃಷಭಾವತಿನಗರ) ಕಾರು ಚಾಲಕ ಬಂಧಿತ ಆರೋಪಿಗಳು.
ಬೆಂಗಳೂರು ಮುಖ್ಯ ರಸ್ತೆಯಲ್ಲಿರುವ ತಾಲ್ಲೂಕಿನ ಸತ್ತೇಗಾಲ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗುವ ಜಂಕ್ಷನ್ ಬಳಿ ಈ ಮೂವರು ಆರೋಪಿಗಳು ರಕ್ತಚಂದನ ಮರದ ತುಂಡುಗಳನ್ನು ಕೆ.ಎ.04 ಡಿ.7257 ಸಂಖ್ಯೆಯ ಸಿಲ್ವರ್ ಬಣ್ಣದ ಟೊಯೊಟ ಕಂಪೆನಿಯ ಯಲ್ಲೋ ಬೋರ್ಡ್ ಇಟಿಯಾಸ್ ಕಾರಿನಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮಡಿಕೇರಿ ಸಿಐಡಿ ಅರಣ್ಯ ಘಟಕ (ಪ್ರಭಾರ) ಪೊಲೀಸ್ ಅದೀಕ್ಷಕರಾದ ಸುದರ್ಶನ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ
ಕೊಳ್ಳೇಗಾಲ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಆರೋಪಿಗಳನ್ನು ಬಂಧಿಸಿ ಸುಮಾರು 8,08,000 ರೂ. ಮೌಲ್ಯದ ರಕ್ತಚಂದನದ ಮರದ 8 ತುಂಡು (ಒಟ್ಟು 101 ಕೆ.ಜಿ.ಗಳು) ಗಳನ್ನು ಕೃತ್ಯಕ್ಕೆ ಬಳಸಿದ್ದ 3,00,000ರೂ. ಮೌಲ್ಯದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಂದ ಅಮಾನತ್ತು ಪಡಿಸಿ ಕೊಂಡ ನಂತರ ಮುಂದಿನ ಕಾನೂನು ಕ್ರಮಜರುಗಿಸುವ ಸಲುವಾಗಿ ಸರ್ಕಾರದ ಪರವಾಗಿ ಸ್ವಯಂ ದೂರು ತಯಾರಿಸಿ ಕೊಳ್ಳೆಗಾಲ ಸಿಐಡಿ ಅರಣ್ಯ ಸಂಚಾರಿ ದಳದ ರಕ್ತ ಚಂದನ ಪ್ರಕರಣ ಸಂಖ್ಯೆ:01/2026 ರಲ್ಲಿ ಪ್ರಕರಣ ದಾಖಲಿಸಿ ವಲಯ ಅರಣ್ಯಾಧಿಕಾರಿ, ಕೊಳ್ಳೇಗಾಲ ಬಫರ್ ವಲಯ ಕೊಳ್ಳೇಗಾಲರವರಿಗೆ ಆರೋಪಿಗಳು, ಸಾಗಾಟಕ್ಕೆ ಬಳಸಿದ ವಾಹನ ಹಾಗೂ ಮಾಲುಗಳ ಸಮೇತ ವರದಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಕೊಳ್ಳೇಗಾಲ ಸಿಐಡಿ ಅರಣ್ಯ ಸಂಚಾರಿ ದಳದ ಆರಕ್ಷಕ ಉಪನಿರೀಕ್ಷಕ ವಿಜಯ್ ರಾಜ್ ಹಾಗೂ ಸಿಬ್ಬಂದಿಗಳಾದ ಬಸವರಾಜು ,ಸೈಯದ್ ಜಮೀಲ್, ಅಹಮದ್, ರಾಮಚಂದ್ರ, ಲತಾ, ಬಸವರಾಜು, ಚಾಲಕ ಪ್ರಭಾಕರ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು

