ಹೀಲಿಯಂ ಗ್ಯಾಸ್ ಸ್ಫೋಟ ಪ್ರಕರಣ:ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ-ಸಿಎಂ

ಮೈಸೂರು: ಅರಮನೆ ಮುಂದೆ ಹೀಲಿಯಂ ಗ್ಯಾಸ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ 5 ಲಕ್ಷ ಪರಿಹಾರ ಘೋಷಣೆ ಮಾಡಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡು ತ್ತಿದ್ದ ವೇಳೆ ಸಿಎಂ ಈ ಘೋಷಣೆ ಮಾಡಿದರು.

ಮೈಸೂರು ಭಾಗದಲ್ಲಿ ಹುಲಿ ಸಂತತಿ ಹೆಚ್ಚಾಗಿದೆ, ಆಹಾರ ಅರಸಿ ಕಾಡಿನಿಂದ ನಾಡಿಗೆ ಹುಲಿಗಳು ಬರುತ್ತಿವೆ. ಕೂಡಲೇ ಹುಲಿ ಸೆರೆ ಹಿಡಿಯಲು ಹಾಗೂ ಬೇರೆ ಕಾಡಿಗೆ ಹುಲಿಗಳನ್ನ ಬಿಡಲು ಸೂಚಿಸಿ ದ್ದೇನೆ ಎಂದು ತಿಳಿಸಿದರು.

ಮನ್ ರೇಗಾ ಹೆಸರು ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಮಂತ್ರಿಗಳು, ಇದು ಸಂವಿದಾನಕ್ಕೆ ವಿರೋಧವಾದದ್ದು,
ಇದರಿಂದ ರಾಜ್ಯ ಸರ್ಕಾರಕ್ಕೆ 3ಸಾವಿರ ಕೋಟಿ ನಷ್ಟ ಆಗುತ್ತದೆ ಎಂದು ಹೇಳಿದರು.

ಜಿ ರಾಮ್ ಜಿ ಹೆಸರು ಬದಲಾವಣೆ ಮೂಲಕ ಕೇಂದ್ರ ಸರ್ಕಾರ ಬಡವರು ಕೂಲಿ ಕಾರ್ಮಿಕರ ಕೆಲಸ ಕಿತ್ತುಕೊಳ್ಳುತ್ತಿದೆ, ಜಿ ರಾಮ್ ಜಿ ಅಂದ್ರೆ ರಾಮನ ಹೆಸರಲ್ಲ ಎಂದು ಕಿಡಿಕಾರಿದರು.

ಸಚಿವ ಸಂಪುಟ ಪುನರಚನೆ ಯಾವಾಗ ಎಂಬ ಸುದ್ದಿಗಾರರ ಪ್ರಶ್ನೆಗೆ,ಈ ಕುರಿತು ರಾಹುಲ್ ಗಾಂಧಿ ಯವರ ಜತೆ ಚರ್ಚೆ ಮಾಡುತ್ತೇನೆ,ಜನವರಿ ತಿಂಗಳಲ್ಲಿ ಮಾತನಾಡ್ತೀನಿ ಅಂದಿದ್ದರು, ಅವರು ಸಮಯ ಕೊಟ್ಟಾಗ ಭೇಟಿ ಮಾಡ್ತೇನೆ, ಹೈಕಮಾಂಡ್ ಜೊತೆ ಚರ್ಚಿಸಿ ನಂತರ ತೀರ್ಮಾನ ಮಾಡ್ತೇನೆ ಎಂದು ಸಿಎಂ ಉತ್ತರಿಸಿದರು.

ದೇವರಾಜ ಅರಸು ಮೈಸೂರು ಜಿಲ್ಲೆಯವರು,ನಾನು ಕೂಡಾ ಮೈಸೂರು ಜಿಲ್ಲೆಯವನೇ,ಅವರ ದಾಖಲೆ ಮುರಿಯುವುದು ಜನರ ಆಶೀರ್ವಾದದಿಂದ.
ಸಾಮಾಜಿಕವಾಗಿ ಅರಸು ಹಿಂದುಳಿದವರಲ್ಲ
ಪಾಪ್ಯುಲೇಷನ್ ವೈಸ್ ಅರಸು ಜನಾಂಗ ಕಡಿಮೆ ಇದೆ ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.

ನನಗೂ ಅವರಿಗೂ ಹೋಲಿಕೆ ಸರಿಯಲ್ಲ,
ಸನ್ನಿವೇಶ ಬಂತು ನಾನು ಇಲ್ಲಿ ತನಕ ಬಂದಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

1983 ರಲ್ಲಿ ನಾನು ಚುನಾವಣೆಗೆ ನಿಂತೆ, ಜನರೇ ದುಡ್ಡು ಕೊಟ್ಟು ವೋಟ್ ಹಾಕಿದ್ದರು ದೇವರಾಜ ಅರಸು ಸಿಎಂ ಆಗಿದ್ರು. ಆ ಕಾಲ ಬೇರೆ ಈ ಕಾಲ ಬೇರೆ ರೆಕಾರ್ಡ್ ಇರೋದೇ ಬ್ರೇಕ್ ಮಾಡೋಕೆ.
ಮುಂದೆ ಯಾರಾದ್ರೂ ಇದನ್ನ ಬ್ರೇಕ್ ಮಾಡಬಹುದು, ಕ್ರಿಕೆಟ್ ಅಲ್ಲಿ ಸಚಿನ್ ರೆಕಾರ್ಡ್ ಬ್ರೇಕ್ ಆಗಲ್ಲ ಅಂದ್ರು.
ವಿರಾಟ್ ಬ್ರೇಕ್ ಮಾಡಿದ್ರು ನನಗಿಂತ ಜಾಸ್ತಿ ಸಿಎಂ ಆಗೋರು ಬಜೆಟ್ ಮಂಡನೆ ಮಾಡೋರು ಬರ ಬಹುದು ಎಂದು ಮುಖ್ಯ ಮಂತ್ರಿ ಪ್ರತಿಕ್ರಿಯಿಸಿದರು.

ಸಾಧನ ಸಮಾವೇಶ ಮಾಡುವಿರಾ ಎಂಬ ಇನ್ನೊಂದು ಪ್ರಶ್ನೆಗೆ‌,ಆ ಬಗ್ಗೆ ಯೋಚನೆ ಮಾಡಿಲ್ಲ,ಆದರೆ ಸಚಿವ
ಕೃಷ್ಣಭೈರೇಗೌಡರು ಕಾರ್ಯಕ್ರಮ ಮಾಡ್ತೀನಿ ಅಂತ ಹೇಳ್ತಾ ಇದ್ರು ನೋಡೋಣ ಎಂದರು ಸಿದ್ದರಾಮಯ್ಯ.