ಮೈಸೂರು: ನನಗೆ ಪೂರ್ಣಾವಧಿ ಸಿಎಂ ಆಗಿರುವ ವಿಶ್ವಾಸ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ಕಾಂಗ್ರೆಸ್ ವಲಯದಲ್ಲಿ ಮತ್ತೆ ಸಂಚಲನ ಸೃಷ್ಟಿಸಿದೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದ ಸಿಎಂ, ನನಗೆ ಹೈ ಕಮಾಂಡ್ ಮೇಲೆ ಪೂರ್ಣ ವಿಶ್ವಾಸ ಇದೆ, ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವೂ ಇದೆ,ಆದರೆ ಏನೇ ಆದರೂ ಹೈ ಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ,ಹೈ ಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದರು.
ನನಗೆ ದೇವರಾಜ ಅರಸು ಅವರ ದಾಖಲೆಯ ಬಗ್ಗೆ ಅರಿವಿರಲಿಲ್ಲ, ಯಾವುದೇ ದಾಖಲೆ ಮುರಿಯಬೇಕು ಎಂಬುದೂ ನನ್ನ ಗಮನದಲ್ಲಿರಲಿಲ್ಲ, ಜನರ ಆಶೀರ್ವಾದದಿಂದ ಎಲ್ಲವೂ ನಡೆದು ಹೋಗಿದೆ,ಇವತ್ತು ದೇವರಾಜ ಅರಸು ದಾಖಲೆ ಸರಿಗಟ್ಟಿದ್ದೇನೆ.
ದೇವರಾಜ ಅರಸು ರಾಜಕಾರಣದ ಸಮಯವೇ ಬೇರೆ. ಇವತ್ತಿನ ಸಮಯವೇ ಬೇರೆ. ಜನರ ಆಶೀರ್ವಾದದಿಂದಷ್ಟೇ ನಾನು ಇಲ್ಲಿಯ ತನಕ ಬಂದಿದ್ದೇನೆ, ನಾನು ಒಂದು ಬಾರಿ ಎಂಎಲ್ಎ ಆದರೆ ಸಾಕು ಅಂದುಕೊಂಡಿದೆ. ಆದರೆ ಎಂಎಲ್ಎ ಡಿಸಿಎಂ ಸಿಎಂ ಎಲ್ಲ ಆಗಿದ್ದೇನೆ ಎಂದು ತಿಳಿಸಿದರು.
ರಾಜ್ಯದ ಹಲವಡೆ ನಿಮ್ಮ ಹೆಸರಲ್ಲಿ ನಾಟಿ ಕೋಳಿ ಪಲಾವ್ ಹಂಚಿಕೆ ಮಾಡುತ್ತಿದ್ದಾರಂತಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಪ್ರತಿಕ್ರಿಯಿಸಿದ ಸಿದ್ದರಾಮಯ್ಯ
ಯಾರು ನಾಟಿ ಕೋಳಿ ಪಲಾವ್ ಹಂಚುತ್ತಿದ್ದಾರೆ ಎಂಬುದು ಗೊತ್ತಿಲ್ಲ ನಾನು ಹಳ್ಳಿಯಿಂದ ಬಂದವನು,ಹಾಗಾಗಿ ನನಗೆ ನಾಟಿ ಕೋಟಿ ಇಷ್ಟ,
ನನ್ನಂತಯೇ ಹಳ್ಳಿಯಿಂದ ಬಂದವರು ನಾಟಿ ಕೋಳಿ ಊಟ ಇಷ್ಟ ಇರುತ್ತದೆ. ನಾನು ಮೊದಲು ನಾಟಿ ಕೋಳಿ ತಿನ್ನುತ್ತಿದೆ. ಈಗ ಕಡಿಮೆ ಮಾಡಿದ್ದೇನೆ.
ಇವತ್ತು ಯಾರು ಹಂಚಿದ್ದಾರೆ ನನ್ನ ಗಮನದಲ್ಲಿಲ್ಲ ಎಂದು ಸಮರ್ಥಿಸಿಕೊಂಡರು.
ಬಳ್ಳಾರಿ ಗಲಾಟೆ ವಿಚಾರ ಕುರಿತ ಪ್ರಶ್ನೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ,
ಜೆಡಿಎಸ್ ಮತ್ತು ಬಿಜೆಪಿ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದರು.
ಗಲಾಟೆ ಬಗ್ಗೆ ತನಿಖೆ ನಡೆಯುತ್ತಿದೆ,
ವರದಿ ಬರಲಿ ಆ ನಂತರ ಮಾತನಾಡುತ್ತೇನೆ.
ಸಿಒಡಿ ತನಿಖೆಗೆ ಕೊಡುವ ಬಗ್ಗೆ ಗೃಹ ಸಚಿವರ ಜೊತೆ ಚೆರ್ಚೆ ಮಾಡುತ್ತೇನೆ ಎಂದು ಹೇಳಿದರು.
ನಿಮ್ಮ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ ಅವರನ್ನು ಭೇಟಿ ಮಾಡಿದ್ದರಲ್ಲಿ ವಿಶೇಷ ವಿದೆಯೆ ಎಂಬ ಮತ್ತೊಂದು ಪ್ರಶ್ನೆಗೆ
ಅವರು ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಹೋಗಿ ದೆಹಲಿಗೆ ಹೋಗುತ್ತಿದ್ದರು,ಹಾಗಾಗಿ ಅವರನ್ನ ಭೇಟಿಯಾಗಿದ್ದೆ ಅಷ್ಟೇ,ಯಾವ ರಾಜಕಾರಣವೂ ಚರ್ಚೆ ಆಗಿಲ್ಲ
ಸಂಪುಟ ಪುನಾರಚನೆ ಬಗ್ಗೆಯೂ ಚರ್ಚಿಸಲಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

