ಚಾಮುಂಡಿ ಬೆಟ್ಟದ ನಂದಿ ರಸ್ತೆ ಮಣ್ಣು ಕುಸಿತ:ಸ್ಥಳಕ್ಕೆ ಮಹದೇವಪ್ಪ ಭೇಟಿ

ಮೈಸೂರು: ಶನಿವಾರ ರಾತ್ರಿ ಸುರಿದ ಜೋರು ಮಳೆಗೆ ಚಾಮುಂಡಿ ಬೆಟ್ಟದ ನಂದಿಗೆ ಹೋಗುವ ರಸ್ತೆಯಲ್ಲಿ ದೊಡ್ಡ ಬಿರುಕು‌ ಬಿಟ್ಟು,ಮಣ್ಣು‌ ಕುಸಿದಿದ್ದು,ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.
ಮಹದೇವಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮಣ್ಣು ಕುಸಿದಿದ್ದ ಸ್ಥಳಕ್ಕೆ ಸಚಿವರು ಭಾನಯವಾರ ಭೇಟಿ ನೀಡಿ ದುರಸ್ತಿ ಕಾಮಗಾರಿಯನ್ನು ಪರಿಶೀಲಿಸಿದರು.

ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ತ್ವರಿತವಾಗಿ ಕಾಮಕಾರಿಯನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದರು.

ನಂದಿ ವಿಗ್ರಹಕ್ಕೆ ತೆರಳುವ ಮಾರ್ಗ ಕಿರಿದಾಗಿದ್ದು, ವಾಹನ ಚಲಾಯಿಸುವುದು‌ ಕಷ್ಟ,ಕೂಡಲೇ ಗುಣಮಟ್ಟದ ರಸ್ತೆಯನ್ನು ಮರು ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಮಹದೇವಪ್ಪ ಅವರೊಂದಿಗೆ ಸಚಿವರ ವಿಶೇಷ ಕರ್ತವ್ಯಾಧಿಕಾರಿ ರವಿಕುಮಾರ್, ಆಪ್ತ ಸಹಾಯಕ ಶ್ರೀನಿವಾಸ್, ರಮೇಶ್ ಮತ್ತಿತರರು ಹಾಜರಿದ್ದರು.