ಮೈಸೂರಿನಲ್ಲಿ ಮತ್ತೆ ಮಾದಕ ದ್ರವ್ಯ ನಿಯಂತ್ರಣ ಮಂಡಳಿ ದಾಳಿ:ಯದುವೀರ್ ಆತಂಕ

ಮೈಸೂರು: ಈ ಹಿಂದೆ ಬಂಧಿತನಾಗಿದ್ದ ಆರೋಪಿಯೊಬ್ಬ ನೀಡಿದ ಮಾಹಿತಿ ಮೇರೆಗೆ ಮಾದಕ ದ್ರವ್ಯ ನಿಯಂತ್ರಣ ಮಂಡಳಿ ಮೈಸೂರಿನಲ್ಲಿ ಮತ್ತೊಮ್ಮೆ ದಾಳಿ ನಡೆಸಿದೆ,ಇದು ನಿಜಕ್ಕೂ ಆತಂಕ ಕಾರಿ ವಿಷಯ ಎಂದು ಸಂಸದ ಯದುವೀರ್ ಒಡೆಯರ್‌ ಕಳವಳ‌ ವ್ಯಕ್ತಪಡಿಸಿದ್ದಾರೆ.

ಮಾದಕ ದ್ರವ್ಯ ನಿಯಂತ್ರಣ ಮಂಡಳಿ ದಾಳಿ ಮಾಡಿ ದಾಗ ಅಲ್ಲಿ ಯಾವುದೇ ನಿಷೇಧಿತ ವಸ್ತುಗಳು ಪತ್ತೆ ಯಾಗದಿದ್ದರೂ, ಮೈಸೂರಿನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ತೀವ್ರ ಕಳವಳಕಾರಿ ಯಾಗಿವೆ ಎಂದು ಸಂಸದರು ಹೇಳಿದ್ದಾರೆ.

ಮಾದಕ ದ್ರವ್ಯ ಜಾಲದ ತನಿಖೆಗಳು ಪದೇ ಪದೇ ಮೈಸೂರಿನತ್ತಲೇ ಬೆರಳು ತೋರಿಸುತ್ತಿವೆ. ಸಂಸ್ಕೃತಿ ಮತ್ತು ಪರಂಪರೆಗೆ ಹೆಸರಾಗಿದ್ದ ನಗರವು ಇಂದು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮಾದಕ ದ್ರವ್ಯ ತನಿಖೆಗಳಿಂದಾಗಿ ಅಪಖ್ಯಾತಿ ಪಡೆಯುವಂತಾಗಿದೆ ಎಂದು ಯದುವೀರ್ ಒಡೆಯರ್ ಬೇಸರ ವ್ಯಕ್ತಪಡಿ ಸಿದ್ದಾರೆ.

ದಾಳಿ ಕೇವಲ ಕಾಕತಾಳೀಯವಲ್ಲ, ಇದು ಹದಗೆಡುತ್ತಿ ರುವ ಕಾನೂನು ಸುವ್ಯವಸ್ಥೆ ಮತ್ತು ದುರ್ಬಲ ಆಡ ಳಿತದ ನೇರ ಫಲಿತಾಂಶವಾಗಿದೆ ಎಂದು ಟೀಕಿಸಿದ್ದಾರೆ.