ಮೈಸೂರು: ಬಿಗ್‌ಬಾಸ್ ರಜತ್ ಗೂ ಗಾಸಿಪ್ ಗಳಿಗೂ ಗಳಸ್ಯ,ಕಂಠಸ್ಯ ಅನ್ಸುತ್ತೆ.ಹಾಗಾಗಿ ಏನಾದರು ಒಂದು ಎಡವಟ್ಟು ಮಾಡಿ ಸುದ್ದಿ ಆಗ್ತಾನೆ ಇರುತ್ತಾರೆ.
ಇದೀಗ ಸಾಂಸ್ಕೃತಿಕ ನಗರಿಗೆ ಬಂದು ಇಲ್ಲೂ ಸುದ್ದಿಯಾಗಿದ್ದಾರೆ.ಮೈಸೂರಿನ ಪಾರಂಪರಿಕ ಕಟ್ಟಡದ ಬಳಿ ಸಿಗರೇಟ್ ಸೇದುತ್ತ ಬಿಂದಾಸ್ ಫೋಟೋ ಶೂಟ್ ಮಾಡಿಸಿಕೊಂಡು ಎಲ್ಲರ ಕೆಂಗಣ್ಣಿಗೆ ರಜತ್ ಗುರಿಯಾಗಿದ್ದಾರೆ.
ಬಿಗ್‌ಬಾಸ್ ರಜತ್ ಹುಚ್ಚಾಟಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಪ್ರಮುಖವಾದ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ರಜತ್ ಫೋಟೊಶೂಟ್ ಮಾಡಿದ್ದಾರೆ.
ಅದರಲ್ಲೂ ಯುವಜನತೆ ಮೇಲೆ ಪರಿಣಾಮ ಬೀರುವ ಅಂದರೆ ಸಿಗರೇಟ್ ಸೇದುತ್ತಾ ಕಾರಿನಿಂದ ಇಳಿಯುವ ವಿಲನ್ ಲುಕ್ಕಿನಲ್ಲಿ ಫೋಟೋ ಶೂಟ್ ಮಾಡಲಾಗಿದೆ.
ಎರಡು ರೀತಿಯ ಫೋಟೊಶೂಟ್ ಮಾಡಿಸಿ ತಮ್ಮ ಅಧಿಕೃತ ಇನ್ಸಟಾಗ್ರಾಂ ನಲ್ಲಿ ರಜತ್ ಅಪ್ಲೋಡ್ ಮಾಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು ನಿಷೇಧವಿದೆ.ಇದೆಲ್ಲಾ ಗೊತ್ತಿದ್ದರೂ ಶೋಕಿಗಾಗಿ ಸಿಗರೇಟ್ ಹಿಡಿದು ರೀಲ್ಸ್ ಮಾಡಿ ಫೋಟೊ ಶೂಟ್ ಮಾಡಿಸಿಕೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಹಿಂದೆ ಶೂಟಿಂಗ್ ಸೆಟ್ ನಲ್ಲಿ ಮಚ್ ಹಿಡಿದು ಫೋಟೊಶೂಟ್ ಮಾಡಿಸಿಕೊಂಡು ಜೈಲಿಗೆ ಹೋಗಿ ಬೇಲ್ ಮೇಲೆ ಹೊರಬಂದಿದ್ದರೂ ರಜತ್ ಗೆ ಬುದ್ದಿ ಬಂದಿಲ್ವಾ ಅಂತ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಎಫ್ಐಆರ್ ದಾಖಲು-
ಸಿಗರೇಟ್ ಸೇದುತ್ತಾ ಕಾರಿನಿಂದ ಇಳಿಯುವ ವಿಲನ್ ಲುಕ್ಕಿನಲ್ಲಿ ಫೋಟೋ ಶೂಟ್ ಮಾಡಿಸಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಕರ್ನಾಟಕ ಸೇನಾ ಪಡೆ ಸದಸ್ಯರು ಕಿಡಿ ಕಾರಿದ್ದಾರೆ.
ಈ ಸಂಬಂಧ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ ಲೋಕೇಶ್ ಗೌಡ ನೇತೃತ್ವದಲ್ಲಿ ಸದಸ್ಯರು ದೂರು ಸಲ್ಲಿಸಿದ್ದಾರೆ.
ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಪ್ರಮುಖವಾದ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ರಜತ್ ಸಿಗರೇಟ್ ಸೇದುತ್ತಾ ವಿಲನ್ ಲುಕ್ನಲ್ಲಿ ಫೋಟೊ ಶೂಟ್ ಮಾಡಿರುವುದು ಖಂಡನೀಯ ಎಂದು ತೇಜೇಶ್ ಲೋಕೇಶ್ ಗೌಡ ತಿಳಿಸಿದ್ದಾರೆ.
ಕೂಡಲೇ ರಜತ್ ಅವರನ್ನು ಕರೆಸಿ ಎಫ್ ಐ ಆರ್ ದಾಖಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಪೋಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

