ಮೈಸೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ : ಮಹೇಂದ್ರ ಥಾರ್ ವಾಹನ ಸೀಸ್

ಮೈಸೂರು: ಮೈಸೂರು ಸಿಸಿಬಿ ಪೊಲೀಸರು ಯುವಕನನ್ನು ಬಂಧಿಸಿ 14 ಲಕ್ಷ ಮೌಲ್ಯದ ಮಹೇಂದ್ರ ಥಾರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ‌

ಕೋಲಾರ ಜಿಲ್ಲೆ,ಮುಳಬಾಗಿಲು ತಾ,ಹೆಬ್ಬಾಣಿ ಗ್ರಾಮದ ಅರುಣ್ ಕುಮಾರ್ @ ಅರುಣ್ ಬಿನ್ ನರಸಿಂಹಯ್ಯ(33)ಬಂಧಿತ ಆರೋಪಿ.

ದೇವರಾಜ ಪೊಲಿಸ್ ಠಾಣೆ ವ್ಯಾಪ್ತಿಯ ಬಿ.ಎನ್.ಎಸ್ ಪ್ರಕರಣದಲ್ಲಿ ಅರುಣ್ ಕುಮಾರ್ ನನ್ನಯ ಬಂಧಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಲಕ್ಷ ಮೌಲ್ಯದ ಮಹೇಂದ್ರ ಥಾರ್ ವಾಹನವನ್ನು ಅಮಾನತ್ತುಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಸಿಬಿಯ ಪೊಲೀಸ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ, ಪಿಎಸ್ಐ ಅನಿಲ್‌ಕುಮಾರ್.ಎನ್, ಎಎಸ್ಐ ಸುರೇಶ್.ಆರ್ ಹಾಗೂ ಸಿಬ್ಬಂದಿಗಳಾದ ಜಗದೀಶ್, ಪ್ರಕಾಶ್.ಟಿ, ಜಯರಾಮ್, ರಾಘವೇಂದ್ರ ಮತ್ತಿತರ ಸಿಬ್ಬಂದಿ ಪಾಲ್ಗೊಂಡಿದ್ದರು.

ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಮೈಸೂರು ನಗರ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.